Header Ads
Header Ads
Breaking News

ಬಡ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ಆರ್ಥಿಕ ನೆರವು

ಮಂಗಳೂರಿನ ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಯು ಬಡ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ಆರ್ಥಿಕ ನೆರವು ಹಾಗೂ ನೈತಿಕ ಬೆಂಬಲ ನೀಡುವ ಉದ್ದೇಶದಿಂದ hope child cancer care foundation ಯೋಜನೆಯ ಒಡಂಬಡಿಕೆಗೆ ಸಹಿ ಹಾಕಿರುವ ಕುರಿತು ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆನಂದ್ ವೇಣುಗೋಪಾಲ್ ಮಾಹಿತಿ ನೀಡಿದರು.ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆನಂದ್ ವೇಣುಗೋಪಾಲ್ ಅವರು,hope child cancer care foundation ಯೋಜನೆಯ ಜೊತೆ ಆಸ್ಪತ್ರೆಯು ಒಡಂಬಡಿಕೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ ನಗರದ ಹಾಗೂ ಉತ್ತರ ಕೇರಳ ರಾಜ್ಯದ ಜನತೆಯ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವಾಗುತ್ತದೆ ಎಂದರು.

ಡಿವಿಜನ್ ಆಫ್ ಪೀಡಿಯಾಟ್ರಿಕ್ ಹೆಮಟಾಲೋಜಿ ಆಂಡ್ ಆಂಕೋಲೊಜಿ(oncology) ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ ಹರ್ಷ ಪ್ರಸಾದ್ ಎಲ್ ಮಾತನಾಡಿ, ಮಕ್ಕಳಿಗೆ ಬರುವಂತಹ ಕ್ಯಾನ್ಸರ್ ಆದಷ್ಟು ಗುಣಪಡಿಸಬಹುದು. ಭಾರತದಲ್ಲಿ ಸುಮಾರು ೫೦ ಸಾವಿರ ಕ್ಯಾನ್ಸರ್ ಪ್ರಕರಣಗಳು childhood leukemia ಪ್ರತಿ ವರ್ಷ ಪತ್ತೆಯಾಗುತ್ತವೆ. ಅವುಗಳಲ್ಲಿ ೧೦ ರಿಂದ ೧೨ ಸಾವಿರ ಪ್ರಕರಣ ಎಂದು ಹೇಳಿದರು. ಈ ಸಂದರ್ಭhope child cancer care foundation  ವೈದ್ಯಕೀಯ ನಿರ್ದೇಶಕ ಡಾ ಝುನೈಲ್ ಅಬಿಧೀನ್ hope child cancer care foundation  ನ ಚೇರ್‌ಮೇನ್ ಹ್ಯಾರಿಸ್, ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಪಿಡ್ರಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥೆ ಡಾ ಕಮಲಾಕ್ಷಿ ಭಟ್ ಉಪಸ್ಥಿತರಿದ್ದರು.

Related posts

Leave a Reply