Header Ads
Breaking News

ಬದಿಯಡ್ಕದ ಕುಂಬ್ಡಾಜೆ ಗ್ರಾ.ಪಂ. ಆಡಳಿತ ವ್ಯವಸ್ಥೆಯ ವಿರುದ್ಧ ಬಿಜೆಪಿ ವತಿಯಿಂದ ಪ್ರತಿಭಟನೆ

ಕಾಸರಗೋಡು ಜಿಲ್ಲೆಯ ಬದಿಯಡ್ಕದ ಕುಂಬ್ಡಾಜೆ ಗ್ರಾ.ಪಂ.ನಲ್ಲಿ ಆಡಳಿತನ ನಡೆಸುತ್ತಿರುವ ಯುಡಿಎಫ್ ಆಡಳಿತ ಸಮಿತಿ ಸಂಪೂರ್ಣ ನಿಷ್ಕ್ರೀಯವಾಗಿದೆ. ಅಭಿವೃದ್ದಿಗೆ ಸಂಬಂಧಿಸಿ ಬೇಜವಾಬ್ದಾರಿ ನಿಲುವು ಹೊಂದಿರುವುದು ಮತ್ತು ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸದಿರುವುದು ಖಂಡನಾರ್ಹ ಎಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ ಆರೋಪಿಸಿದರು.

ಕುಂಬ್ಡಾಜೆ ಗ್ರಾ.ಪಂ.ನ ಆಡಳಿತ ನಿಷ್ಕ್ರೀಯತೆ ಮತ್ತು ಬೇಜವಾಬ್ದಾರಿ ನಿಲುವುಗಳಿಗೆ ಎದುರಾಗಿ ಬಿಜೆಪಿ ಕುಂಬ್ಡಾಜೆ ಪಂಚಾಯತಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಜು.20ರ ಮೊದಲು ಜನರ ಬಳಕೆಗೆ ಬಳಸಲು ಕಾರ್ಯಯೋಜನೆ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಬಿಜೆಪಿ, ವಿವಿಧ ಮೋರ್ಚಾಗಳ ಮುಖಂಡರು ಹಾಜರಿದ್ದರು.

Related posts

Leave a Reply

Your email address will not be published. Required fields are marked *