Header Ads
Header Ads
Breaking News

ಬದುಕಿ ಬಂದ ಮೀನುಗಾರ. ಸಮುದ್ರದಲ್ಲಿ ಬಿದ್ದ ಮೀನುಗಾರನ ರಕ್ಷಣೆ.

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಆಯತಪ್ಪಿ ಬೋಟ್‌ನಿಂದ ಕೆಳಬಿದ್ದು6ಗಂಟೆಗಳ ಕಾಲ ಪ್ರಾಣ ಕೈಯಲ್ಲಿ ಹಿಡಿದು ಕಡಲಿನಲ್ಲಿ ಈಜಿ ಬದುಕಿ ಬಂದ ಘಟನೆ ಗುರುವಾರ ರಾತ್ರಿ ನಡೆದಿದೆ.ತಮಿಳುನಾಡು ಮೂಲದ ಮೀನುಗಾರ ನಾಗರಾಜ್ ಬೋಟ್‌ನಿಂದ ಆಕಸ್ಮಿಕವಾಗಿ ಕೆಳ ಬಿದ್ದಿದ್ದಾರೆ. ಬೋಟ್‌ನಲ್ಲಿದ್ದವರು ಇತರ ಬೋಟ್‌ನವರಿಗೆ ವಿಚಾರ ತಿಳಿಸಿದ್ದಾರೆ. ೪೦ ಕ್ಕೂ ಹೆಚ್ಚು ಬೋಟ್‌ನಲ್ಲಿದ್ದ ಮೀನುಗಾಗರು ಹುಡುಕಾಡಿದರೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.ಈ ವಿಚಾರವನ್ನು ಎನ್‌ಎಮ್‌ಪಿಟಿಯಲ್ಲಿರುವ ಕೋಸ್ಟ್ ಗಾರ್ಡ್ ಸಿಬಂದಿಗೆ ತಿಳಿಸಿದಾಗ ಹುಡುಕಾಟಕ್ಕಿಳಿದಿದ್ದು, ೬ ಗಂಟೆಗಳ ಬಳಿಕ ನಾಗರಾಜ್‌ನನ್ನು ರಕ್ಷಿಸಿ ಪಣಂಬೂರಿಗೆ ಕರೆ ತಂದಿದ್ದಾರೆ.

Related posts

Leave a Reply