Header Ads
Header Ads
Breaking News

ಬನ್ನೂರು ಕರ್ಮಲದಲ್ಲಿ ನೂತನವಾಗಿ ನಿರ್ಮಿಸಿದ ರಸ್ತೆಯ ಉದ್ಘಾಟನೆ

ಬನ್ನೂರಿನ ಕರ್ಮಲ ದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿಯ ಕಾಂಕ್ರೀಟ್ ರಸ್ತೆ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಕಾಂಕ್ರೀಟ್ ರಸ್ತೆಯನ್ನು ಪುತ್ತೂರು ನಗರ ಸಭೆಯ ವಾರ್ಡ್ ನಂ 25ರ ಸದಸ್ಯೆ ಕೆ.ಫಾತಿಮತ್ ಝೂರಾ ಉದ್ಘಾಟಿಸಿದರು. ಪುತ್ತೂರು ನಗರ ಸಮಿತಿ ಅಧ್ಯಕ್ಷರಾದ ಬಶೀರ್ ಕೂರ್ನಡ್ಕ ಪ್ರಾಸ್ತಾವಿಕ ಭಾಷಣ ಮಾಡಿದರು.


ಈ ವೇಳೆ ದುರ್ಗಾ ಪರಮೇಶ್ವರಿ ದೇವಸ್ಥಾನದ ಧರ್ಮಾದಿಕಾರಿ ಶ್ರೀ ರಾಜಣ್ಣ, ಬನ್ನೂರು ವಲಯಧ್ಯಕ್ಷ ಮೊಹಮ್ಮದ್ ಹುಸೇನ್, ಸಿಲ್ ಸಿಲಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಇಬ್ರಾಹಿಮ್ ಕೆ ಎಂ, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಪಿ.ಬಿ.ಕೆ, ಸ್ಥಳೀಯರಾದ ಸತ್ಯ, ತಿಲಕ್ ರಾಜ್, ಕೃಷ್ಣಪ್ಪ, ರಮೇಶ, ವಾಣಿ, ಜಾನಕಿ ಸುರೇಶ್ ಎಸ್‌ಡಿಪಿಐ ಕಾರ್ಯಕರ್ತರು ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *