Header Ads
Header Ads
Breaking News

ಬಪ್ಪನಾಡು ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮ, ಹೊರೆಕಾಣಿಕೆ ಮೆರವಣಿಗೆ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಧಾರ್ಮಿಕ ಸಭಾಕಾರ್ಯಕ್ರಮ ಮತ್ತು ಹೊರೆಕಾಣಿಕೆ ಮೆರವಣಿಗೆ ನಡೆಯಿತು.ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ದಾರ್ಮಿಕ ಕಾರ್ಯಕ್ರಮವನ್ನು ಉದ್ಘಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ದೋಷ ದುರಿತಗಳನ್ನು ದೂರ ಮಾಡುವ ಶಕ್ತಿಯೆನಿಸುವ ದೇವರ ಮುಂದೆ ನಮ್ಮ ಮನಸ್ಸು ಒಂದಾಗಬೇಕು. ಸಮಾಜ ಒಗ್ಗಟ್ಟಾಗಿ ದೇವಾಲಯಗಳ ಅಭಿವೃದ್ದಿಯಲ್ಲಿತೊಡಗಿಸಿಕೊಳ್ಳಬೇಕು. ಸಮಾಜವನ್ನು, ಜನರ ಮನಸ್ಸನ್ನು ಒಂದಾಗಿಸುವ ಉದ್ದೇಶವೇ ದೇಗುಲಗಳದ್ದು. ಉತ್ಸವ ಬ್ರಹ್ಮಕಲಶೋತ್ಸವಗಳ ಉದ್ದೇಶ ಕೂಡ ಅದುವೇ ಆಗಿದೆ ಎಂದರು.

ಭಾರತೀಯ ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಭಟ್ ಎಂ.ಎಸ್. ಶಾಸಕ ಅಭಯಚಂದ್ರ ಜೈನ್ ಮೂಡುಬಿದ್ರೆಯ ಡಾ. ಮೋಹನ ಆಳ್ವ, ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಶ್ರೀಮತಿ ಎಂ. ಕೆ. ಪ್ರಮೀಳಾ, ಕಟೀಲು ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರು ಸನತ್ ಕುಮಾರ್ ಶೆಟ್ಟಿ, ಮೊದಲಾದವರು ವೇದಿಕೆಯಲ್ಲಿದ್ದರು. ಕಾರ್ಯಕ್ರಮಕ್ಕೂ ಮೊದಲು ಮುಲ್ಕಿ ಬಪ್ಪನಾಡು ದೇವಸ್ಥಾನಕ್ಕೆ ಸಂಬಂಧ ಪಟ್ಟ 32 ಗ್ರಾಮಗಳಿಂದ ಹೊರೆ ಕಾಣಿಕೆ ಸಮರ್ಪಿಸಲಾಯಿತು. ಕಾರ್ನಾಡು ಗಾಂಧಿ ಮೈದಾನದಲ್ಲಿ ಹೊರಟ ಹೊರೆ ಕಾಣಿಕೆ ಮೆರವಣಿಗೆ ಬಪ್ಪನಾಡು ದೇವಸ್ಥಾನದವರೆಗೆ ನಡೆಯಿತು. ಮೆರವಣಿಗೆ ಉದ್ದಕ್ಕೂ ಚೆಂಡೆ, ಡೋಲು, ವಿವಿಧ ವೇಷಗಳು ಭಕ್ತರ ಗಮನ ಸೆಳೆದವು, ಮೆರವಣಿಗೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು ನೂರಾರು ವಾಹನಗಳಲ್ಲಿ ಅಕ್ಕಿ, ಬೆಲ್ಲ, ಬೆಳೆ, ಕಾಳುಗಳನ್ನು ತಂದು ದುರ್ಗೆಗೆ ಸಮರ್ಪಿಸಲಾಯಿತು. ಸಮಿತಿಯ ಕಾರ್‍ಯದರ್ಶಿ ಸುನಿಲ್ ಆಳ್ವ, ಸಂತೋಷ್ ಕುಮಾರ ಶೆಟ್ಟಿ, ಶರತ್ ಶೆಟ್ಟಿ ಬಳಿಕ ಆಳ್ವಾಸ್ ವಿದ್ಯಾ ಸಮೂಹ ಸಂಸ್ಥೆಗಳ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.
ವರದಿ: ನಿಶಾಂತ್ ಮುಲ್ಕಿ