Header Ads
Breaking News

ಬಫರ್ ಝೋನ್‍ನಲ್ಲಿರುವ ಪಿಲಾರು ದಾರಂದಬಾಗಿಲು : ಗಂಟಲ ದ್ರವ ಸಂಗ್ರಹ ಮತ್ತು ಆರೋಗ್ಯ ತಪಾಸಣೆ

ಉಳ್ಳಾಲ: ಪಿಲಾರು ದಾರಂದಬಾಗಿಲು ಬಫರ್ ಝೋನ್ ಒಳಪಟ್ಟ ಪ್ರದೇಶದ 45 ಮಂದಿಯ ಕೊರೊನಾ ಪರೀಕ್ಷೆ ಮಂಗಳೂರಿನ ಕೋವಿಡ್ ತಂಡ ಪಿಲಾರು ಯುವಕ ಮಂಡಲದಲ್ಲಿ ನೆರವೇರಿಸಿತು. ಅಷ್ಟೂ ಮಂದಿಯ ವರದಿ ಮೇ24 ರಂದು ಬರಲಿದೆ.

ಪಿಲಾರು ದಾರಂದಬಾಗಿಲು ನಿವಾಸಿ 38ರ ಹರೆಯದ ಮಹಿಳೆಗೆ ಮೇ 13 ರಂದು ಕೊರೊನಾ ಸೋಂಕು ದೃಢವಾಗಿತ್ತು. ಪಡೀಲು ಫಸ್ಟ್ ನ್ಯುರೋ ಆಸ್ಪತ್ರೆಗೆ ಮಗಳನ್ನು ದಾಖಲಿಸಿದ ಹಿನ್ನೆಲೆಯಲ್ಲಿ ಅಲ್ಲಿನ ಸಂಪರ್ಕದಿಂದ ಕೊರೊನಾ ಬಂದಿರುವುದಾಗಿ ಜಿಲ್ಲಾಡಳಿತ ವರದಿಯಲ್ಲಿ ಹೇಳಿತ್ತು. ಅಂದು ಮನೆಯಲ್ಲಿದ್ದ ಒಂಭತ್ತು ಮಂದಿಯನ್ನು ಮಂಗಳೂರಿನಲ್ಲಿ ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಅಲ್ಲಿ ಅವರ ಪರೀಕ್ಷೆಯನ್ನು ನಡೆಸಲಾಗಿದ್ದು, 9 ಮಂದಿಯ ವರದಿಯು ನೆಗೆಟಿವ್ ಆಗಿ ಬಂದಿದೆ. ಇದೀಗ ಮಹಿಳೆಯಿದ್ದ ಮನೆ ಸುತ್ತದ 100 ಮೀ ವ್ಯಾಪ್ತಿ ಬಫರ್ ಝೋನಿನ 45 ಮಂದಿಯ ವರದಿಯನ್ನು ಸಂಗ್ರಹಿಸಲಾಗಿದ್ದು, ಸೋಮವಾರ ವರದಿ ಬರಲಿದೆ.

ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೋಪಿಪ್ರಕಾಶ್ ನೇತೃತ್ವದಲ್ಲಿ ಗಂಟಲು ದ್ರವ ಸಂಗ್ರಹ ನಡೆಯಿತು. ಸ್ಥಳದಲ್ಲಿ ಸೋಮೇಶ್ವರ ಪುರಸಭೆ ಪೌರಾಯುಕ್ತೆ ವಾಣಿ ಆಳ್ವ, ಆರೋಗ್ಯ ಅಧಿಕಾರಿ ರಾಜೇಶ್, ಪುರಸಭೆ ಕೌನ್ಸಿಲರುಗಳಾದ ದೀಪಕ್ ಪಿಲಾರ್, ಉದಯ ಗಟ್ಟಿ, ಗಂಗಾಧರ್, ಪುರುಷೋತ್ತಮ್ ಶೆಟ್ಟಿ, ಆಶಾ ಕಾರ್ಯಕರ್ತೆಯರು , ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *