Header Ads
Header Ads
Breaking News

ಬಯೋಮೆಟ್ರಿಕ್ ಪಡಿತರ ವ್ಯವಸ್ಥೆಯಿಂದ ಅವ್ಯವಹಾರ ನಿಯಂತ್ರಣ: ಸಚಿವ ಜಮೀರ್ ಆಹಮದ್

ಪಡಿತರ ವ್ಯವಸ್ಥೆಯಲ್ಲಿ ಸರಕಾರ ಜಾರಿಗೆ ತಂದಿರುವ ಬಯೋ ಮೆಟ್ರಿಕ್ ಯೋಜನೆಯಿಂದ ಪಡಿತರ ಕೇಂದ್ರಗಳಲ್ಲಿ ನಡೆಯುತ್ತಿದ್ದ ಅವ್ಯವಹಾರಗಳು ಕಡಿಮೆ ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೆಲವೊಂದು ಸಮಸ್ಯೆಗಳು ಬಿಟ್ಟರೆ ಪಡಿತರ ವಿತರಣೆ ಸಮರ್ಪಕವಾಗಿ ನಡೆಯುತ್ತಿದೆ. ಬಯೋಮೆಟ್ರಿಕ್ ವ್ಯವಸ್ಥೆ ಬಂದ ಬಳಿಕ ಸರಕಾರಕ್ಕೆ580 ಕೋಟಿ ಲಾಭ ಆಗಿದೆ ಎಂದು ಆಹಾರ, ನಾಗರಿಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಆಹಮ್ಮದ್ ಖಾನ್ ಹೇಳಿದರು.ಅವರು ಸುಳ್ಯದ ಅರಂತೋಡುನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಪಡಿತರ ವ್ಯವಸ್ಥೆಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಬರುವ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಅವ್ಯವಹಾರಗಳು ನ್ಯಾಯಬೆಲೆ ಅಂಗಡಿಗಳಲ್ಲೇ ನಡೆಯುತ್ತಿತ್ತು.

ತಂಬ್ ಬಂದ ಬಳಿಕ ಪಡಿತರ ಸಾಮಾಗ್ರಿಗಳ ಕಳ್ಳ ಸಾಗಾಟ ನಿಂತಿದೆ. ಬಯೋಮೆಟ್ರಿಕ್ ವ್ಯವಸ್ಥೆ ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯೆ ಇದೆ. ಈ ಭಾಗಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ಇದರ ಬಗ್ಗೆ ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಬಯೋಮೆಟ್ರಿಕ್ ವ್ಯವಸ್ಥೆಗೆ ಪ್ರತಿ ಕೇಂದ್ರಗಳಿಗೆ4000 ರೂ ನೀಡುತ್ತಿದ್ದೇವೆ. ನೆಟ್‌ವರ್ಕ್ ಸಮಸ್ಯೆ ನಿವಾರಣೆಗಾಗಿ ಖಾಸಾಗಿ ಕಂಪೆನಿಗಳಿಗೆ ನೀಡಲು ಸರಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.ಮಡಿಕೇರಿ ಮತ್ತು ಜೋಡುಪಾಲ ಪ್ರಕೃತಿ ದುರಂತದಲ್ಲಿ ಸಂತ್ರಸ್ತರಾದ 1198 ಕುಟುಂಬಗಳಿಗೆ ಮನೆ ಆಗುವ ವರೆಗೆ ಪ್ರತಿ ತಿಂಗಳು10ಸಾವಿರಗಳನ್ನು ನೀಡಲಾಗುವುದು. ಅಲ್ಲದೇ ಸಂತ್ರಸ್ತರ ಪ್ರತಿ ಮನೆ ಕೂಡ 7 ಲಕ್ಷ ವೆಚ್ಚದಲ್ಲಿ ಮಾಡಲಾಗುವುದು ಎಂದು ಕ್ಯಾಬಿನೆಟ್‌ನಲ್ಲಿ ತೀರ್ಮಾಣ ಮಾಡಲಾಗಿದೆ. ನಮ್ಮದು ಬಡವರ ಪರವಾದ ಸರಕಾರ ಬಡವರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದರು.ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಟಿ.ಎಂ.ಶಹೀದ್, ಎಂ. ವೆಂಕಪ್ಪ ಗೌಡ, ಜಿ.ಕೆ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply