Header Ads
Header Ads
Header Ads
Header Ads
Header Ads
Header Ads
Breaking News

ಬರಗೆಟ್ಟು ಹೋದ ಬಯಲು ರಂಗ ಮಂದಿರ : ಆವರಣಗೋಡೆ ಮೇಲೆ ಅಶ್ಲೀಲ ಬರಹ

ಉಡುಪಿ ಹೃದಯ ಭಾಗದಲ್ಲಿರುವ ಸರ್ಕಾರಿ ಬಯಲು ರಂಗಮಂದಿರವು ಉಡುಪಿ ಜಿಲ್ಲೆಯ ಪ್ರಮುಖ ಕಾರ್ಯಕ್ರಮಗಳು ನಡೆಯುವಂತ ಜಾಗವಾಗಿದ್ದು ಪ್ರಸ್ತುತ ಯಾವುದೇ ರೀತಿಯ ನಿರ್ವಹಣೆ ಇಲ್ಲದೆ ತೀರ ಹದಗೆಟ್ಟಿದೆ. ಅಷ್ಟೇ ಅಲ್ಲದೆ ಮಹಾತ್ಮ ಗಾಂಧಿ ರಂಗ ಮಂದಿರದ ಆವರಣದ ಗೋಡೆ ಮೇಲೆ ಯಾರೋ ಕಿಡಿಗೇಡಿಗಳು ಅಶ್ಲೀಲ ಬರಹಗಳನ್ನು ಗೀಚಿದ್ದಾರೆ. ಇದನ್ನು ಎರಡು ದಿನಗಳ ಹಿಂದೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ನಗರದ ಬೀಡಿನಗುಡ್ದೆಯಲ್ಲಿರುವ ಈ ರಂಗಮಂದಿರವು ಉಡುಪಿಯ ನಗರ ಸಭೆಗೆ ಸೇರಿದ್ದಾಗಿರುತ್ತದೆ. ಸದ್ಯಕ್ಕೆ ನಗರಸಭೆ ಅಧಿಕಾರಿಗಳು ಈ ಅಶ್ಲೀಲ ಗೋಡೆ ಬರಹಗಳನ್ನು ತೆರವುಗೊಳಿಸಲು ಆದೇಶವನ್ನು ನೀಡಿದ್ದು, ರಂಗಮಂದಿರದ ಗೋಡೆಯ ಮೇಲೆ ಬರೆಯಲಾದ ಬರಹಗಳನ್ನು ಬಿಳಿ ಬಣ್ಣ ಬಳಸಿ ತೆಗೆಸುತ್ತಿರುವುದು ಕಂಡುಬಂತು. ನಾಳೆ ಸ್ವಾತಂತ್ರ್ಯ ದಿನಾಚರಣೆಯಿದ್ದು ಬರಹದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಅಶ್ಲೀಲ ಬರಹ ಬರೆದ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಂತಹ ಕಿಡಿಗೇಡಿಗಳ ಗುಂಪು ಕೇವಲ ಸಾರ್ವಜನಿಕ ಸ್ವತ್ತುಗಳನ್ನು ಹಾಳು ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ ಎಂಬುವುದಂತು ಸತ್ಯ.

Related posts

Leave a Reply

Your email address will not be published. Required fields are marked *