Header Ads
Header Ads
Header Ads
Breaking News

ಬರಡಾಗಿದ್ದ ಗದ್ದೆಯಲ್ಲಿ ನಳನಳಿಸುತ್ತಿರುವ ಭತ್ತದ ಕೃಷಿ ಓರ್ವ ಮಹಿಳೆಯ ಶ್ರಮದಿಂದ ಕಂಬಳ ಗದ್ದೆಗೆ ಹೊಸ ಚೈತನ್ಯ ನೋಣಾಲುವಿನ ಪ್ರತಿಭಾ ಹೆಗ್ಡೆ ಕೃಷಿ ಸಾಧಕಿ

ಆರು ಎಕರೆಯ ವಿಶಾಲವಾದ ಕಂಬಳ ಗದ್ದೆ ಕೂಲಿ ಕಾರ್ಮಿಕರ ಕೊರತೆಯಿಂದ ಕಳೆದ 9 ವರ್ಷಗಳಿಂದ ಬೆಳೆ ಇಲ್ಲದೆ ಹಡಿಲು ಬಿದ್ದಿತ್ತು. ಯಾಂತ್ರೀಕರಣ ವಿಧಾನವನ್ನು ಬಳಸಿಕೊಂಡು ಕೃಷಿ ಮಾಡಲು ಮುಂದಾಗಿ ಬರಡಾಗಿದ್ದ ಗದ್ದೆ ಈಗ ಹಚ್ಚ ಹಸಿರಿನಿಂದ ನಳನಳಿಸುವಂತಾಗಿದೆ. ಭತ್ತದ ಕೃಷಿಯತ್ತ ರೈತರು ನಿರಾಸಕ್ತಿ ತೋರುತ್ತಿರುವ ಈ ಕಾಲಘಟ್ಟದಲ್ಲಿ ಒರ್ವ ಮಹಿಳೆಯ ಶ್ರಮದಿಂದ ಕಂಬಳ ಗದ್ದೆ ಮತ್ತೆ ಹೊಸ ಚೈತನ್ಯವನ್ನು ಪಡೆದುಕೊಂಡಿದೆ.

ಮಂಗಳೂರು ತಾಲೂಕು ವ್ಯಾಪ್ತಿಯ ನೋಣಾಲುವಿನ ಪ್ರತಿಭಾ ಹೆಗ್ಡೆ ಈ ಕೃಷಿ ಸಾಧಕಿ. ರೈತಸಂಘ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಭತ್ತದ ಸಾಗುವಳಿ ಮಾಡಿ ಬರಡಾಗಿದ್ದ ಕಂಬಳ ಗದ್ದೆ ಮತ್ತೆ ತನ್ನ ಗತವೈಭವವನ್ನು ಮೆರೆಯುವಂತೆ ಮಾಡಿದ್ದಾರೆ.

ಕೊಳವೂರು ಗುತ್ತಿನ ಮನೆತನಕ್ಕೆ ಒಳಪಟ್ಟ ಈ ಕಂಬಳ ಗದ್ದೆ ಹಿಂದೆ ಸುಮಾರು 60 ಮುಡಿ ಅಕ್ಕಿ ನೀಡುತ್ತಿದ್ದ ವಿಶಾಲ ಗದ್ದೆಯಾಗಿತ್ತು. ಕೃಷಿ ಸಂಸ್ಕೃತಿಯ ಭಾಗವಾಗಿ ಗದ್ದೆ ಮಧ್ಯೆ ಪೂಕರೆ ಹಾಕಿ, ಕಂಬಳಕೋರಿ ನಡೆಸಿ ಬೇಸಾಯ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದ ಪದ್ದತಿ ಇಲ್ಲಿತ್ತು. ಸಾಂಕೇತಿಕವಾಗಿ ಕೋಣಗಳನ್ನು ಓಡಿಸಿ ಕಂಬಳ ಕ್ರೀಡೆಯನ್ನು ಪ್ರೋತ್ಸಾಹಿಸುವ ಪರಂಪರೆಯೂ ಈ ಕಂಬಳ ಗದ್ದೆಯಲ್ಲಿ ನಡೆಯುತ್ತಿತ್ತು. ಊರಿನ ಎಲ್ಲಾ ರೈತರು ಸೇರಿ ಒಂದೆರಡು ದಿನಗಳಲ್ಲಿ ನಾಟಿ ಕಾರ್ಯ ನಡೆಸುತ್ತಿದ್ದ ವೈಭವದ ದಿನಗಳನ್ನು ಇಲ್ಲಿಯ ಹಿರಿಯರು ಈಗಲೂ ನೆನೆಪಿಸಿಕೊಳ್ಳುತ್ತಾರೆ. ಕ್ರಮೇಣ ಕಾರ್ಮಿಕರ ಕೊರತೆಯಿಂದಾಗಿ ವಿಶಾಲ ಗದ್ದೆಯಲ್ಲಿ ಕೃಷಿ ನಡೆಸಲು ಸಾಧ್ಯವಾಗದೆ ಕಳೆದ ಒಂಭತ್ತು ವರ್ಷಗಳಿಂದ ಹಡಿಲು ಬಿದ್ದಿತ್ತು. ಈ ಮದ್ಯೆ ಎರಡು ವರ್ಷಗಳ ಕಾಲ ಗುತ್ತಿನ ಮನೆತನಕ್ಕೆ ಒಳಪಟ್ಟ ದಯಾನಂದ ಶೆಟ್ಟಿ ಎಂಬವರು ಸಾಗುವಳಿ ಮಾಡಿ ಬಳಿಕ ಸಾಧ್ಯವಾಗದೆ ಬಿಟ್ಟು ಬಿಟ್ಟಿದ್ದರು.

Related posts

Leave a Reply