Header Ads
Breaking News

ಬರ್ಕೆ ಪರಿಸರದಲ್ಲಿ ಮದ್ಯ ಸೇವಿಸುತ್ತಿದ್ದ ಯುವಕರು : ಪೊಲೀಸರಿಂದ ಬಿಸಿ

ಮಂಗಳೂರು ನಗರ ಪೊಲೀಸರು ನಿನ್ನೆ ರಾತ್ರಿ ಬರ್ಕೆ ಮತ್ತು ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏರಿಯಾ ಡಾಮಿನೇಷನ್ ಕಾರ್ಯಾಚರಣೆ ನಡೆಸಿದ್ರು. ಕತ್ತಲಿನ ಪ್ರದೇಶದಲ್ಲಿ ಅನಾವಶ್ಯಕ ತಿರುಗಾಡುವವರನ್ನು ಕರೆದೊಯ್ದು ವಿಚಾರಿಸುವುದು ಇದರ ಉದ್ದೇಶ. ನೆಹರೂ ಮೈದಾನದ ಬಳಿ ಹಾಗೂ ಬರ್ಕೆ ಪರಿಸರದಲ್ಲಿ ಮದ್ಯ ಸೇವಿಸುತ್ತಿದ್ದ ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರು ಡಿಸಿಪಿಗಳು, 10 ಮಂದಿ ಅಧಿಕಾರಿಗಳು , 50 ಮಂದಿ ಸಿಬ್ಬಂದಿ ಇದರಲ್ಲಿ ಬಾಗವಹಿಸಿದ್ದರು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಪಾಲನೆಗೆ ಜನ ಸಹಕರಿಸುವಂತೆ ವಿನಂತಿಸಿದ್ದಾರೆ.

Related posts

Leave a Reply

Your email address will not be published. Required fields are marked *