Header Ads
Breaking News

ಬರ್ತ್, ಸರ್ಟಿಫಿಕೇಟ್ ಹಿಡ್ಕೊಂಡು ವಿಧಾನಸಭೆಗೆ ಬರುವವರಿದ್ದಾರೆ: ಬಿಜೆಪಿ ಮುಖಂಡ ಸಂತೋಷ್ ಹೇಳಿಕೆ

ಬರ್ತ್, ಮ್ಯಾರೇಜ್ ಸರ್ಟಿಫಿಕೇಟ್ ಹಿಡ್ಕೊಂಡು ವಿಧಾನಸಭೆಗೆ ಬರುವವರಿದ್ದಾರೆ.ಆದ್ರೆ ಮೋದಿ ಜಾತಿ, ವಂಶದ ಆಧಾರದಲ್ಲಿ ರಾಜಕಾರಣ ಮಾಡಲಿಲ್ಲ ಅಂತ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.

ಉಡುಪಿಯ ಮಣಿಪಾಲದ ಕಂಟ್ರಿ ಇನ್ ಹೊಟೇಲ್‌ನಲ್ಲಿ ನಡೆದ ಮೈ ಕಂಟ್ರಿ, ಮೈ ರೋಲ್ ಮಹಿಳಾ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಮೋದಿ ಪಾರ್ಲಿಮೆಂಟ್‌ಗೆ ತಲೆಬಾಗಿ ನಮಿಸಿ ಒಳಬರ್ತಾರೆ. ಈ ಮೋದಿಗೆ ಇದೆಲ್ಲಾ ಹೇಗೆ ಹೊಳೀತು ಅಂತ ಖರ್ಗೆ ಹೇಳ್ತಾರೆ ಇದೆಲ್ಲಾ ಹೊಳೆಯೋದಲ್ಲ ಅರಳೋದು ಅಂತ ಖರ್ಗೆಗೆ ಗೊತ್ತಿಲ್ಲ ಎಂದು ಹೇಳಿದ್ರು. ಬಡವರಾದವರು ಸೈನಿಕರಾಗಿದ್ದಾರೆ ಅಂತಾರೆ. ಸೈನಿಕರ ದೇಶಸೇವೆಗೆ ಬಡತನ ಕಾರಣ ಅನ್ನೋದು ಅಮಾನವೀಯ. ಅಭಿನಂದನ್ ಅವರು ಸಾಹಸ ಮೆರೆದಾಗ ಯಾರೂ ಜಾತಿ ಹುಡುಕಲು ಹೋಗಿಲ್ಲ ಎಂದ್ರು..

Related posts

Leave a Reply

Your email address will not be published. Required fields are marked *