Header Ads
Header Ads
Breaking News

ಬಲೇ ಚಾಪರ್‍ಕ ವಿನೂತನ ಕಾರ್ಯಕ್ರಮ

ಬಂಟ್ವಾಳ: ಶತಮಾನದತ್ತ ಸಾಗುತ್ತಿರುವ ಇಲ್ಲಿನ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮತ್ತಷ್ಟು ಸಶಕ್ತಗೊಳಿಸಿ ವಿದ್ಯಾಥಿಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಊರು ನಮ್ಮ ಶಾಲೆ, ಶಾಲೆಯತ್ತ ನಮ್ಮ ಚಿತ್ತ, ನಮ್ಮ ಹೆಜ್ಜೆ ಎನ್ನುವ ಧ್ಯೇಯ ವಾಕ್ಯದಡಿ ಬಲೇ ಚಾಪರ್‍ಕ ಎನ್ನುವ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ವಿಶೇಷ ಅತಿಥಿಯಾಗಿ ಚಿತ್ರನಟ ದೇವದಾಸ್ ಕಾಪಿಕಾಡ್ ಅವರು ಭಾಗವಹಿಸಿ ಮಾತನಾಡಿ ಇಂದು ಉನ್ನತ ಸ್ಥಾನದಲ್ಲಿರುವವರು ಎಲ್ಲರೂ ಸರಕಾರಿ ಶಾಲೆಯಲ್ಲಿಯೇ ಓದಿದವರಾಗಿದ್ದಾರೆ, ತಾನು ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಕಲಿತವನಾಗಿದ್ದರೂ ಉತ್ತಮವಾಗಿ ಇಂಗ್ಲೀಷ್ ಮಾತನಾಡಬಲ್ಲೆ, ಮನಸ್ಸಿದ್ದರೆ ಎಲ್ಲವೂ ಸಾದ್ಯ ಎಂದು ತಿಳಿಸಿದರು. ಕನ್ನಡ ಭಾಷೆಯ ಜೊತೆಗೆ ವ್ಯಾವಹಾರಿಕವಾಗಿ ಪ್ರಗತಿ ಹೊಂದಲು ಇಂದಿನ ದಿನಗಳಲ್ಲಿ ಇಂಗ್ಲೀಷ್ ಅಗತ್ಯವಿದೆ ಎಂದ ಅವರು ಶಾಲೆಯ ಅಭಿವೃದ್ದಿಗಾಗಿ ತಾನು ಸಹಕರಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶಿವಪ್ರಕಾಶ್ ಮಾತನಾಡಿ ಸರಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ವಿನೂತನವಾದ ಪ್ರಯೋಗಗಳು ನಮ್ಮ ಶಾಲೆಯಲ್ಲಿ ಆಗುತ್ತಿದೆ. ಅನೇಕ ಪೋಷಕರು ಖಾಸಗಿ ಶಾಲೆಯಲ್ಲಿ ಓದುತ್ತಿರುವ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಶಾಲೆಯನ್ನು ಬಲಪಡಿಸುತ್ತಿದ್ದಾರೆ ಇಂತಹ ಕಾರ್ಯಗಳು ನಮಗೆಲ್ಲರಿಗೂ ಮಾದರಿ ಎಂದರು. ವಿದ್ಯಾರ್ಥಿಗಳ ಪೋಷಕರು ಸರಕಾರಿ ಶಾಲೆ ಹಾಗೂ ಖಾಸಗಿ ಶಾಲೆಯನ್ನು ಪರಸ್ಪರ ತುಲನೆ ಮಾಡಿ ನೋಡಬೇಕು, ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಓದಿಸಿದರೆ ವರ್ಷಕ್ಕೆ ಕನಿಷ್ಟ ೩ ಲಕ್ಷ ರುಪಾಯಿಯನ್ನು ಉಳಿಸಲು ಸಾಧ್ಯವಿದೆ ಎಂದು ಅವರು ವಿಟ್ಲ ಹಾಗೂ ದಡ್ಡಲಕಾಡು ಶಾಲೆಯಲ್ಲಿ ಗ್ರಾಮಸ್ಥರ ಸಹಕಾರದಿಂದಲೇ ಇಂದು ಸೆಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದರು. ಶಾಲಾಭಿವೃದ್ದಿ ಸಮಿತಿಯ ಗೌರವಾಧ್ಯಕ್ಷ ಡಾ. ರಮೇಶಾನಂದ ಸೋಮಾಯಾಜಿ ಅಧ್ಯಕ್ಷತೆ ವಹಿಸಿದ್ದರು.
ಪುರಸಭಾ ಸದಸ್ಯೆ ವಿದ್ಯಾವತಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್, ಮುಖ್ಯೋಪಧ್ಯಾಯಿನಿ ಕುಶಲ, ಪ್ರಮುಖರಾದ ಬೇಬಿ ಕುಂದರ್, ಸತೀಶ್ ಕುಲಾಲ್, ಡಿ.ಎಂ.ಕುಲಾಲ್, ರಮೇಶ್ ನಾಯಕ್ ರಾಯಿ, ಉಮನಾಥ ರೈ ಮೇರಾವು, ಶಿವಪ್ರಸಾದ್ ಶೆಟ್ಟಿ, ಬಿ.ಶ್ರೀಧರ ಅಮೀನ್ ಅಗ್ರಬೈಲು ಬಿ.ರಾಮಚಂದ್ರ ರಾವ್ ಹಾಜರಿದ್ದರು.

Related posts

Leave a Reply

Your email address will not be published. Required fields are marked *