Header Ads
Breaking News

“ಬಲೇ ತುಳು ಲಿಪಿ ಕಲ್ಪುಗ” ಕಾರ್ಯಾಗಾರಕ್ಕೆ ಚಾಲನೆ

ತುಳು ಬಾಷೆ, ಸಂಸ್ಕೃತಿ, ಲಿಪಿ, ಆಚಾರ ಇಚಾರಗಳನ್ನು ಉಳಿಸಿ ಬೆಳೆಸುವ ಹಾಗು ತುಳು ಬಾಷೆಯನ್ನು ಸಂವಿಧಾನ 8ನೇ ಪರಿಚ್ಛೇಧಕ್ಕೆ ಸೇರಿಸಬೇಕು ಮತ್ತು ತುಳುವನ್ನು ರಾಜ್ಯದ ಅಧಿಕೃತ ಬಾಷೆನ್ನಾಸಬೇಕು ಎಂಬ ಉದ್ದೇಶದಿಂದ ತುಳುನಾಡಿನಲ್ಲಿ ಕೆಲಸ ಮಾಡುತ್ತಿರುವ ಸಂಘನೆಯಾದ ಜೈ ತುಳುನಾಡ್(ರಿ) ಕಾಸರಗೋಡು ಘಟಕವು ಬಲೇ ತುಳು ಲಿಪಿ ಕಲ್ಪುಗ ಕಾರ್ಯಾಗಾರವನ್ನು ತೀಯಾ ಸಮಾಜ ಉದ್ಯಾವರ ಮಾಡ ಇದರ ಸಹಯೋಗದಲ್ಲಿ ಮಂಜೇಶ್ವರ ಮಾಡದ ತೀಯಾ ಸಮಾಜಭವನದಲ್ಲಿ ಪ್ರಾರಂಬಿಸಿದೆ.

ಕಾರ್ಯಕ್ರಮ ದ ಉದ್ಘಾಟನೆಯನ್ನು ಅರಸು ಮಂಜೀಷ್ಣಾರ್ ಕ್ಷೇತ್ರ ಮಾಡದ ಪಲಯ ದೈವದ ಪಾತ್ರಿ ರಾಜ ಬೆಲ್ಚಾಡರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಜೈ ತುಳುನಾಡ್ ರಿ. ಕಾಸರಗೋಡು ಇದರ ಅಧ್ಯಕ್ಷ ರಾದ ಹರಿಕಾಂತ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅಥಿತಿಗಳಾಗಿ ಮಂಜೇಶ್ವರ ಪಂಚಾಯತ್ ಸದಸ್ಯ ಲಕ್ಷ್ಮಣ ಕುಲಾಲ್, ಅರಸು ಮಂಜೀಷ್ಣಾರ್ ದೈವಸ್ಥಾನದ ಮೆಗ್ಯ ದೈವದ ಪಾತ್ರಿ ತಿಮಿರಿ ಬೆಲ್ಚಾಡರು, ಮಾಡ ಸಮಾಜದ ಹಿತೈಷಿ ಹರೀಶ್ ಶೆಟ್ಟಿ ಹಾಗು ಮಾಜಿ ಪಂಚಾಯಿತಿ ಸದಸ್ಯೆ ಶಶಿಕಲಾ ಪಾಲ್ಗೊಂಡರು. ತುಳು ಲಿಪಿ ಶಿಕ್ಷಕರಾಗಿ ಜೈತುಳುನಾಡ್ ರಿ ಕಾಸರಗೋಡು ಇದರ ಉಪಾಧ್ಯಕ್ಷೆ ವಿನೋದ ಪ್ರಸಾದ್ ರೈ ಕಾರಿಂಜೆ ಹಾಗು ಕಾರ್ಯದರ್ಶಿ ಕಾರ್ತಿಕ್ ಪೆರ್ಲ ತರಗತಿ ನೀಡಿದರು. ಸಂಘಟನೆಯ ಗೌರವಾಧ್ಯಕ್ಷ ಉಮೇಶ್ ಸಾಲಿಯಾನ್ ಸಿರಿಯಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕು. ತೃಪ್ತಿ ಮತು ಕು. ಪಂಚಮಿ ಪ್ರಾರ್ಥಿಸಿದರು. ಸಂಘಟನೆಯ ಸದಸ್ಯೆ ಕುಶಾಲಾಕ್ಷಿ ವಿ ಕುಲಾಲ್ ಕನ್ವಥೀರ್ಥ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಕಾರ್ತಿಕ್ ಪೆರ್ಲ ದನ್ಯವಾದಗೈದರು.

Related posts

Leave a Reply

Your email address will not be published. Required fields are marked *