Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಬಶೀರ್ ಹಂತಕರು ನೇತ್ರಾವತಿ ನದಿಗೆ ಎಸೆದ ಮೊಬೈಲ್, ಮಾರಕಾಸ್ತ್ರ ಎಸಿಪಿ ನೇತೃತ್ವದ ಪೊಲೀಸರ ತಂಡದಿಂದ ಹುಡುಕಾಟ ಉಳ್ಳಾಲ ಸೇತುವೆ ಬಳಿ ವ್ಯಾಪಕ ಶೋಧ

ಕೊಟ್ಟಾರಚೌಕಿಯಲ್ಲಿ ಆಕಾಶಭವನ ನಿವಾಸಿ ಬಶೀರ್ ಹತ್ಯೆ ನಡೆಸಿದ ಹಂತಕರು ಕೃತ್ಯ ಬಳಿಕ ಎಸೆದ ಮೊಬೈಲ್ ಮತ್ತು ಮಾರಕಾಸ್ತ್ರಗಳನ್ನು ನೇತ್ರಾವತಿ ಸೇತುವೆಯಿಂದ ನದಿಗೆ ಎಸೆದಿದ್ದು, ಈ ಕುರಿತ ಮಹಜರು ಎಸಿಪಿ ವೆಲಂಟೈನ್ ನೇತೃತ್ವದ ಪೊಲೀಸರ ತಂಡದಿಂದ ಬುಧವಾರ ನಡೆಯಿತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೇಶ್, ಧನುಷ್, ಸೃಜಿತ್ ಮತ್ತು ಕಿಶನ್ ಎಂಬವರನ್ನು ಬಂಧಿಸಲಾಗಿದೆ. ಈ ನಾಲ್ವರು ಬಶೀರ್ ಅವರನ್ನು ಕೊಟ್ಟಾರಚೌಕಿ ಬಳಿ, ಫಾಸ್ಟ್ ಫುಡ್ ಅಂಗಡಿ ಮುಚ್ಚಿ ಮನೆಗೆ ಹಿಂತಿರುಗುವ ಸಂದರ್ಭ ತಡೆದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕಡಿದು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಹತ್ಯೆಗೆ ಉಪಯೋಗಿಸಿದ ಮಾರಕಾಸ್ತ್ರ, ಮೊಬೈಲುಗಳನ್ನು ನಾಲ್ವರು ಆರೋಪಿಗಳು ನೇತ್ರಾವತಿ ಸೇತುವೆಯಿಂದ ನದಿಗೆ ಎಸೆದು ಕೇರಳದ ಮಂಜೇಶ್ವರ ಕಡೆಗೆ ಪರಾರಿಯಾಗಿದ್ದರು. ಬಂಧಿತರ ವಿಚಾರಣೆ ಕೈಗೊಂಡಾಗ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದಕ್ಕಾಗಿ ಮುಳುಗು ತಜ್ಞರ ಸಹಕಾರದೊಂದಿಗೆ ಕಾರ್ಯ ಮುಂದುವರಿದಿದೆ.

Related posts

Leave a Reply