Header Ads
Header Ads
Header Ads
Breaking News

ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಹುಟ್ಟುಹಬ್ಬದ ಆಚರಣೆ

ಕುಂದಾಪುರ : ರಾಗಾ, ದ್ವೇಷಗಳಿಲ್ಲದೆ, ಜಾತಿ-ಧರ್ಮದ ಸಂಕೋಲೆಗಳನ್ನು ಕಟ್ಟಿಕೊಳ್ಳದೆ, ಮುಕ್ತವಾದ ಹಾಗೂ ಪರಿಶುದ್ಧವಾದ ಪ್ರೀತಿಯಿಂದ ಬದುಕನ್ನು ಕಟ್ಟಿಕೊಂಡು ಸಮಾಜಮುಖಿಯಾಗಿ ಬದುಕುವವರೆ ನಿಜ ಅರ್ಥದಲ್ಲಿ ವಿಶ್ವ ಮಾನವವರು ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಷಿ ಹೇಳಿದರು.

ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಮಂಗಳವಾರ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ನಡೆದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ೮೫ ನೇ ಹುಟ್ಟುಹಬ್ಬದ ಆಚರಣೆ, ದತ್ತಿನಿಧಿ ವಿತರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಡಾ.ಎಂ.ಮೋಹನ್ ಆಳ್ವ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಹೆತ್ತವರು ಧನ್ಯತಾ ಭಾವವನ್ನು ಕಾಣುವಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಪರಿವರ್ತನೆಯ ಪ್ರವರ್ಧಮಾನ ಕಾಲದಲ್ಲಿ ಮನುಷ್ಯ ತನ್ನತನವನ್ನು ಕಳೆದುಕೊಳ್ಳುವ ಸ್ಥಿತಿಯತ್ತ ಹೆಚ್ಚು ವಾಲುತ್ತಿದ್ದಾನೆ. ಜೀವನದ ಪ್ರಾರಂಭದಿಂದ ಕೊನೆಯ ಕ್ಷಣದವರೆಗೂ ವಿದ್ಯಾರ್ಥಿಯಾಗಿರುವವರು ಮಾತ್ರ ಸಾಧನೆ ಉತ್ತುಂಗ ತಲುಪುತ್ತಾರೆ. ಜೀವನದಲ್ಲಿ ಏರಿಳಿತಗಳು ಇದ್ದಾಗ ಮಾತ್ರ ಬದುಕು ಸಾರ್ಥಕಗೊಳ್ಳುತ್ತದೆ. ಜೀವನದಲ್ಲಿ ಕಾಣುವ ಪ್ರತಿಯೊಂದು ಏರಿಳಿತಗಳನ್ನು ಸಂಯಮ ಹಾಗೂ ಸಮಚಿತ್ತದಿಂದ ಸ್ವೀಕಾರ ಮಾಡಬೇಕು. ಕಪ್ಪು ಚುಕ್ಕೆ ಇಲ್ಲದ ೮೫ ವರ್ಷಗಳ ಸಾರ್ಥಕತೆಯನ್ನು ಕಂಡಿರುವ ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಬದುಕುವ ರೀತಿ ಸಮಾಜಕ್ಕೆ ಆದರ್ಶಪ್ರಾಯವಾಗಬೇಕು ಎಂದು ಅವರು ಹಾರೈಸಿದರು.

ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೂಡಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಪ್ರಶಸ್ತಿಗಳನ್ನು ಬೇರೆಯವರಿಗೆ ನೀಡುವುದು ಸಂತೋಷದ ಕೆಲಸ ಆದರೆ ಪ್ರಶಸ್ತಿಗಳನ್ನು ಸ್ವೀಕರಿಸುವುದು ತುಂಬಾ ಕಷ್ಟದ ಕೆಲಸ. ಐಶ್ವರ್ಯ ಹಾಗೂ ಹೆಸರಿನ ಉದ್ದೇಶಗಳನ್ನು ಇಟ್ಟುಕೊಂಡು ಕೆಲಸ ಮಾಡಬಾರದು, ನಿಸ್ವಾರ್ಥ ಭಾವದಿಂದ ಕೆಲಸವನ್ನು ಮಾಡುವುದರಿಂದ ಐಶ್ವರ್ಯ ಹಾಗೂ ಹೆಸರು ಹುಡುಕಿಕೊಂಡು ಬರುತ್ತದೆ. ಪ್ರಸ್ತುತ ಕಾಲ ಘಟ್ಟದಲ್ಲಿ ಮೌಲ್ಯಾಧಾರಿತ ಬದುಕನ್ನು ತ್ಯೆಜಿಸಿ ಹೇಗೆ ಬದುಕನ್ನು ಸಾಗಿಸಬೇಕು ಎನ್ನುವುದೆ ಜಿಜ್ಞಾಸೆಯಾಗಿದೆ. ಹಿಂದೆ ನಮ್ಮ ಹಿರಿಯರು ಸಮಾಜದ ಬೆಳವಣಿಗೆಯ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುತ್ತಿದ್ದರೇ, ಇಂದು ಇನ್ನಾವುದೋ ಉದ್ದೇಶಕ್ಕಾಗಿ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗುತ್ತಿದೆ. ವಿದ್ಯೆ ವ್ಯಾಪಾರೀಕರಣವಾಗುತ್ತಿದೆ. ಕೇರಳ, ಮಹಾರಾಷ್ಟ್ರ ಮುಂತಾದ ಹೊರ ರಾಜ್ಯಗಳಿಂದಲೂ ಬಂಡವಾಳಶಾಹಿಗಳು ನಮ್ಮ ರಾಜ್ಯದಲ್ಲಿ ದೊಡ್ಡ ಮೊತ್ತದ ವಿನಿಯೋಗವನ್ನು ಮಾಡುತ್ತಿದ್ದಾರೆ. ಶಿಕ್ಷಣ ಮೂಲ ಉದ್ದೇಶವನ್ನು ಬಿಟ್ಟು ಇಂಡಸ್ಟ್ರೀಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

೩ನೇ ಹಣಕಾಸು ಆಯೋಗದ ಅಧ್ಯಕ್ಷ ಎ.ಜಿ.ಕೊಡ್ಗಿ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ ಎಂ ಶೆಟ್ಟಿ, ಶ್ರೀ ಕ್ಷೇತ್ರ ಕೊಲ್ಲೂರಿನ ಹಿರಿಯ ಅರ್ಚಕ ಡಾ.ಎನ್.ನರಸಿಂಹ ಅಡಿಗ, ಮಾಜಿ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಹಿರಿಯಣ್ಣ ಹಾಗೂ ಕಂಚಿ ಕಾಮಕೋಟಿ ಶಂಕರಾಚಾರ್ಯ ಶ್ರೀ ಮಠದ ಪರವಾಗಿ ಅಪ್ಪಣ್ಣ ಹೆಗ್ಡೆಯವರನ್ನು ಅಭಿನಂದಿಸಲಾಯಿತು.

ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಮೂಡಬಿದಿರಿ ಅಧ್ಯಕ್ಷತೆ ವಹಿಸಿದ್ದರು. ಜಯಶ್ರೀ ಕೆ.ಅಮರನಾಥ ಶೆಟ್ಟಿ, ಬಸ್ರೂರು ಅಪ್ಪಣ್ಣ ಹೆಗ್ಡೆ, ನಾಗರತ್ನ ಅಪ್ಪಣ್ಣ ಹೆಗ್ಡೆ, ಬಾಂಡ್ಯಾ ಸುಭಾಶ್ಚಂದ್ರ ಶೆಟ್ಟಿ, ಡಾ.ಸುಶಾಂತ ರೈ, ರಾಮ್‌ರತನ್ ಹೆಗ್ಡೆ, ಪ್ರೀತಮ್ ರೈ, ನಿರುಪಮಾ ಹೆಗ್ಡೆ, ದಿವ್ಯಾ ಆರ್ ಹೆಗ್ಡೆ, ಮೋಹಿನಿ ಹೆಗ್ಡೆ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *