Header Ads
Breaking News

ಬಸ್ ನಿರ್ವಾಹಕನ ನಗದು, ಮೊಬೈಲ್ ಫೋನ್ ಕಳವುಗೈದ ಆರೋಪಿ ಅಂದರ್!

ಕುರುಡಪದವು-ಉಪ್ಪಳ ಭಾಗದಲ್ಲಿ ಓಡುವ ಖಾಸಗಿ ಬಸ್‌ನ ನಿರ್ವಾಹಕ ಜಯಪ್ರಕಾಶ್ ಅವರ ನಗದು ಮತ್ತು ಮೊಬೈಲ್ ಫೋನ್, ವಾಚ್ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕುರುಡ ಪದವು ಗೋಳಿಕಟ್ಟ ನಿವಾಸಿ ರಹೀಂ ಆಲಿಯಾಸ್ ಅಬ್ದುಲ್ ರಹ್ಮಾನ್ (25) ಬಂಧಿತ ಆರೋಪಿ.  ರಾತ್ರಿ ಬಸ್ ಸಂಚಾರ ನಿಲ್ಲಿಸಿದ ಬಳಿಕ ಕುರುಡಪದವಿನಲ್ಲಿ ಕೊಠಡಿಯೊಂದರಲ್ಲಿ ನಿದ್ದೆ ಮಾಡಿದ್ದ ಜಯಪ್ರಕಾಶ್ ಅವರ ಬ್ಯಾಗ್‌ನಲ್ಲಿದ್ದ 1500 ರೂ. ನಗದು, ಮೊಬೈಲ್, ವಾಚ್ ಮತ್ತೆ ಬಸ್‌ನ ಪೆಟ್ಟಿಗೆಯೊಂದರಲ್ಲಿದ್ದ 6000 ರೂ. ಕಳವು ಮಾಡಲಾಗಿತ್ತು. ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿತ್ತು. ಇದರಂತೆ ಕಾರ್ಯಾಚರಿಸಿದ ಪೊಲೀಸರು ಆರೊಪಿಯನ್ನು ಬಂಧಿಸಿದ್ದಾರೆ.

Related posts

Leave a Reply

Your email address will not be published. Required fields are marked *