Header Ads
Breaking News

ಬಸ್ ಪ್ರಯಾಣ ಪುನರುಜ್ಜೀವನಗೊಳಿಸಲು ಚಲೋ ಆ್ಯಪ್

ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ತಂತ್ರಜ್ಞಾನ ಪಾಲುದಾರರ ಸಹಭಾಗಿತ್ವದೊಂದಿಗೆ ಮಂಗಳೂರು ನಗರದಲ್ಲಿ ಬಸ್ ಪ್ರಯಾಣವ್ನನು ಪುನರುಜ್ಜೀವನಗೊಳಿಸುವ ಸಲುವಾಗಿ ಚಲೋ ಕಾರ್ಡ್‍ನ್ನು ಆರಂಭಿಸಿದ್ದು ಇಂದು ಚಲೋ ಕಾರ್ಡ್‍ಗೆ ಚಾಲನೆಯನ್ನು ನೀಡಲಾಯಿತು.

ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ದಕ್ಷಿಣ ಕನ್ನಡದಲ್ಲಿ ಬಸ್ ಮಾಲಕರ ಸಂಘದ ತಾಂತ್ರಿಕ ಪಾಲುದಾರನಾಗಿರುವ ಚಲೋ ಬಸ್ ಪ್ರಯಾಣದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ನೂತನ ತಂತ್ರಜ್ಞಾನಗಳನ್ನು ಬಸ್ ನಿರ್ವಾಹಕರಿಗೆ ಮತ್ತು ಪ್ರಯಾಣಿಕರಿಗೆ ಪರಿಚಯಿಸುತ್ತಿದೆ. ಈ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ದಿಲ್‍ರಾಜ್ ಆಳ್ವಾ ಅವರು, ಸಿಟಿ ಬಸ್‍ಗಳನ್ನು ಡಿಜಿಟಲ್ ಪಾವತಿಯು ಈಗಿನ ಅವಶ್ಯಕತೆಗಳಲ್ಲಿ ಒಂದಾಗಿದ್ದು, ಇದು ಬಸ್ ಪ್ರಯಾಣವನ್ನು ಸಂಪರ್ಕ ರಹಿತ ಗೊಳಿಸುವುದರೊಂದಿಗೆ ಎಲ್ಲರಿಗೂ ಸುರಕ್ಷಿತವಾಗಿರುತ್ತದೆ. ಈ ಸೂಪರ್ ಸೇವರ್ ಪ್ಲಾನ್‍ನಲ್ಲಿ ನೀಡಲಾಗುವ ಕೊಡುಗೆಗಳು ಸಾಮಾನ್ಯ ಜನರ ಕೈಗೆಟಕುವ ದರದಲ್ಲಿದ್ದು, ನಾಗರಿಕರ ಬಸ್ ಪ್ರಯಾಣವನ್ನು ಸಂಪರ್ಕ ರಹಿತ ಮಾಡಿ ಅವರನ್ನು ವೈರಾಣುಗಳ ಅಪಾಯದಿಂದ ರಕ್ಷಿಸುತ್ತದೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಸುಶೀಲ್ ಶೆಟ್ಟಿ, ಸಂತೋಷ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *