Header Ads
Breaking News

ಬಹರೇನ್‌ನ ಅಮ್ಮ ಕಲಾವಿದರು ಇಂಡಿಯನ್ ಕ್ಲಬ್’ನ ಆಶ್ರಯದಲ್ಲಿ ಒಟ್ರಾಸಿ ಮಂಡೆಬೆಚ್ಚ ಸಾಮಾಜಿಕ ಹಾಸ್ಯ ನಾಟಕ ಪ್ರದರ್ಶನ

ಬಹರೇನ್‌ನ ಅಮ್ಮ ಕಲಾವಿದರು ಸ್ಥಳೀಯ ಇಂಡಿಯನ್ ಕ್ಲಬ್’ನ ಆಶ್ರಯದಲ್ಲಿ ಪ್ರದರ್ಶಿಸಿದಂತಹ ತುಳು ಸಾಮಾಜಿಕ ಹಾಸ್ಯ ನಾಟಕ ಒಟ್ರಾಸಿ ಮಂಡೆಬೆಚ್ಚ ನೆರೆದಂತಹ ಸಾವಿರಾರು ಪ್ರೇಕ್ಷಕರ ಮನಸೂರೆಗೊಳಿಸಿತು,ದ್ವೀಪದ ಸಾಂಸ್ಕೃತಿಕ ರಂಗದಲ್ಲಿ ಶ್ರೀಯುತ ಮೋಹನದಾಸ್ ಎರುಂಬುರವರ ದಕ್ಷ ಸಂಘಟನೆಯಲ್ಲಿ ಅಮ್ಮ ಕಲಾವಿದರು ಈಗಾಗಲೇ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಚಿರಪರಿಚಿತರಾಗಿದ್ದು ಪ್ರದರ್ಶನಗೊಂಡ ನಾಡಿನ ಖ್ಯಾತ ನಾಟಕಕೃತ ಶ್ರೀ ದಿನಕರ ಭಂಡಾರಿ ಕಣಂಜಾರವರು ಈ ನಾಟಕವನ್ನು ಬರೆದಿದ್ದಾರೆ, ದ್ವೀಪದ ಮೋಹನ್ ದಾಸ್ ಎರುಂಬುರವರು ಈ ನಾಟಕವನ್ನು ನಿರ್ದೇಸಿದ್ದಾರೆ, ನಾಡಿನ ಖ್ಯಾತ ರಂಗ ಕಲಾವಿದ ಸುಂದರ್ ರೈ ಯವರು ಪ್ರದಾನ ನಿರ್ದೇಶನ ಮಾಡಿ ನಟಿಸಿದ್ದಾರೆ.

ಜೊತೆಗೆ ಊರಿನ ಖ್ಯಾತ ಹಾಸ್ಯ ಕಲಾವಿದ ರವಿ ರಾಮಕುಂಜರವರು ದ್ವೀಪದ ಹವ್ಯಾಸಿ ಕಲಾವಿದರ ಪ್ರಬುದ್ಧ ಅಭಿನಯ ಗಟ್ಟಿಗತೆ ಹಾಗು ದಕ್ಷ ನಿರ್ದೇಶನದಿಂದಾಗಿ ಈ ನಾಟಕ ರಂಗದ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದು ನೆರೆದ ಸಾವಿರಾರು ಕಲಾಭಿಮಾನಿಗಳನ್ನು ಸುಮಾರು ನಾಲ್ಕು ಗಂಟೆಗಳ ಕಾಲ ರಂಜಿಸುವಲ್ಲಿ ಯಶಶ್ವಿಯಾಯಿತು. ಈ ನಾಟಕದಲ್ಲಿ ನಾಡಿನ ರಂಗಭೂಮಿಯ ದಿಗ್ಗಜ್ಜ ಸುಂದರ್ ರೈ ಮಂದರವರು ಪುರಂದರ ಪಾತ್ರವನ್ನು ಅಭಿನಯಿಸಿದಾರೆ ಜೊತೆಗೆ ಅತಿಥಿ ಕಲಾವಿದ ಬಲೇ ತೆಲಿಪಾಲೆ,ಕಾಮಿಡಿ ಪ್ರೀಮಿಯರ್ ಲೀಗ್ ಹಾಸ್ಯರತ್ನ ರವಿ ರಾಮಕುಂಜರವರು ರಾಘವನ ಪಾತ್ರ ಅಭಿನಯಿಸಿ ನೆರೆದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ರಂಜಿಸಿದರು.ಇನ್ನು ಈ ನಾಟಕಗೆ ದ್ವೀಪದ ಯುವ ಸಂಗೀತಗಾರದ ಯಕ್ಷಿತ್ ಶೆಟ್ಟಿ ಮತ್ತು ದಿವ್ಯರಾಜ್ ರೈ ಯವರು ಸಂಗೀತವನ್ನು ನೀಡಿ ನಾಟಕವನ್ನು  ಮೆರಗು ಗೊಳಿಸಿದರು.

ಇದೆ ಸಂದರ್ಭದಲ್ಲಿ ಅಮ್ಮ ಕಲಾವಿದರ ಪರವಾಗಿ ನಾಡಿನಿಂದ ಬಂದಂತಹ ಅತಿಥಿ ಕಲಾವಿದರಾದ ಸುಂದರ ರೈ ಮತ್ತು ರವಿ ರಾಮಕುಂಜರನ್ನು ಸನ್ಮಾನಿಸಲಾಯಿತು, ಹಾಗು ಇತರ ಕಲಾವಿದರುಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಗಣ್ಯರಾದ ಸುಭಾಶ್ಚಂದ್ರ, ರಾಜೇಶ್ ಬಿ ಶೆಟ್ಟಿ,ಕನ್ನಡ ಸಂಘದ ಅಧ್ಯಕ್ಷರಾದಂತಹ ಪ್ರದೀಪ್ ಶೆಟ್ಟಿ, ಸ್ಥಳೀಯ ಚರ್ಚಿನ ಫಾದರ್ ಡೇನಿಯಲ್, ಹಾಗೂ ಮತ್ತಿತರರು ಉಪಸ್ಥಿರಿದ್ದರು.

Related posts

Leave a Reply

Your email address will not be published. Required fields are marked *