Header Ads
Header Ads
Header Ads
Breaking News

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ಶಾಸಕ ಗೋಪಾಲ ಪೂಜಾರಿಯಿಂದ ಗುದ್ದಲು ಪೂಜೆ

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಾಸಕ ಗೋಪಾಲ ಪೂಜಾರಿ ಶಂಕುಸ್ಥಾಪನೆ ನೆರವೇರಿಸಿದರು. ನಾಡಾ ಗ್ರಾಮಪಂಚಾಯತ್ ವ್ಯಾಪ್ತಿಯ ಕೊಣ್ಕಿ ಮಹಾಲಿಂಗೇಶ್ವರ ದೇವಳದ ಬಳಿ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೇರವೇರಿಸಿದರು.

ನಂತರ ನಾಡಾ ಪಂಚಾಯತ್ ವಠಾರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಈ ಯೋಜನೆಗೆ ಟೆಂಡರ್ ಕರೆದು ಬಹಳ ಕಾಲದವರೆಗೆ ಯಾರು ಬಂದಿರಲಿಲ್ಲ. ನಂತರ ಮಂಗಳೂರಿನ ಗುತ್ತಿಗೆದಾರರ ಅನಿಲ್ ಕುಮಾರ್ ಶೆಟ್ಟಿ ಮುಖಾಂತರ ಈ ಕಾಮಗಾರಿಯನ್ನ ನಡೆಸುತ್ತಿದ್ದೆವೆ. ಹಕ್ಲಾಡಿ ಮತ್ತು ಮರವಂತೆಗೆ ಕುಡಿಯುವ ನೀರಿನ ಸೌಕರ್ಯ ನೀಡಲು ಸಾಧ್ಯವಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಈ ಯೋಜನೆ ಯಶಸ್ವಿಯಾಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಹೆಗ್ಡೆ, ತಾ.ಪಂ ಉಪಾಧ್ಯಕ್ಷ ಪ್ರವೀಣ್ ಕಡ್ಕೆ ಮೊದಲಾದವರು ಇದ್ದರು.

ಐದು ವರ್ಷಗಳವರೆಗೆ ಈ ಗುತ್ತಿಗೆ ಪಡೆದಿರುವ ಅಮರ್ ಇನ್‌ಫ್ರಾಪ್ರಾಜೆಕ್ಟ್ ವಹಿಸಿಕೊಂಡಿದೆ. ನಂತರ ಪಂಚಾಯತ್ ಮಟ್ಟದಲ್ಲಿ ಕಮಿಟಿಯೊಂದನ್ನ ನಿರ್ಮಾಣ ಮಾಡಿ ಇದರ ನಿರ್ವಹಣೆಯನ್ನ ಮಾಡಲಾಗುತ್ತದೆ. ಒಂದು ವರ್ಷದೊಳಗೆ ಸಂಪೂರ್ಣ ಕಾಮಗಾರಿ ನಡೆಸುವುದಾಗಿ ಸಂಸ್ಥೆ ಹೇಳಿಕೊಂಡಿದೆ.

ವರದಿ: ಹರೀಶ್ ಕಿರಣ್ ತುಂಗಾ, ಕುಂದಾಪುರ

Related posts

Leave a Reply