Header Ads
Header Ads
Breaking News

ಬಹುಗ್ರಾಮ ಯೋಜನೆಗೆ ಗ್ರಾಮಸ್ಥರ ವಿರೋಧ:ಕುರ್ಕಾಲು ಗ್ರಾ.ಪಂ. ಮುಂಭಾಗ ಪ್ರತಿಭಟನೆ

ಕುರ್ಕಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಬಡಗುಂಡಿಯಿಂದ ಕಾಪು ಪುರಸಭೆಗೆ ನೀರು ಪೂರೈಸುವ ಬಹುಗ್ರಾಮ ಯೋಜನೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಕುರ್ಕಾಲು,ಮಣಿಪುರ,ಬೆಳ್ಳೆ ಸಹಿತ ವಿವಿಧ ಪ್ರದೇಶಗಳ ನೂರಾರು ಗ್ರಾಮಸ್ಥರು ಕುರ್ಕಾಲು ಗ್ರಾಮ ಪಂಚಾಯಿತಿ ಮುಂಭಾಗ ಯೋಜನೆಯ ವಿರುದ್ಧ ಪ್ರತಿಭಟಿಸಿ ಗ್ರಾ.ಪಂ. ಪಿಡಿಒಗೆ ಮನವಿ ಸಲ್ಲಿಸಿದರು.

ಬಹುಗ್ರಾಮ ಕುಡಿಯುವ ನೀರು ಯೋಜನೆ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಕುರ್ಕಾಲು ದಿನಕರ್ ಶೆಟ್ಟಿ ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನಮ್ಮ ಗ್ರಾಮಗಳಿಗೆ ಯಾವುದೇ ಪ್ರಯೋಜನವಾಗದು ಬೇಸಿಗೆಯಲ್ಲಿ ಟ್ಯಾಂಕರ್ ನೀರು ಕುಡಿಯುವ ಗ್ರಾಮಸ್ಥರು ಈ ಯೋಜನೆ ಅನುಷ್ಠಾನಗೊಂಡಲ್ಲಿ ಸರ್ವ ಋತುವಿನಲ್ಲೂ ಟ್ಯಾಂಕರ್ ನೀರನ್ನು ಆಶ್ರಯಿಸಬೇಕಾಗ ಬಹುದು. ಮಲ್ಲಿಗೆ,ಭತ್ತ,ತೆಂಗು,ಕಂಗು ಕೃಷಿಗೆ ವರದಾನವಾಗಿದ್ದ ಜಲಮೂಲಕ್ಕೆ ಈ ಯೋಜನೆ ಕೊಡಲಿಯೇಟು ನೀಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕುರ್ಕಾಲು ಗ್ರಾಮ ಪಂಚಾಯಿತಿ ಆಡಳಿತದ ಗಮನಕ್ಕೆ ತಾರದೆ ಕುರ್ಕಾಲು ಪಾಪನಾಶಿನಿ ಕಿಂಡಿಅಣೆಕಟ್ಟು ಸಮೀಪದಲ್ಲಿ 100 ಎಚ್‌ಪಿ ಪಂಪು ಅಳವಡಿಸಿ ಒಂದು ಅಡಿ ಅಗಲದ ಪೈಪು ಅಳವಡಿಸಿ ದೂರದ ಇನ್ನಂಜೆ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಿ, ಈ ಮೂಲಕ ಕಾಪು ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಸದ್ರಿ ಯೋಜನೆಯನ್ನು ನಡೆದ ಸಮಾಲೋಚನಾ ಸಭೆಯಲ್ಲಿ ಗ್ರಾಮಸ್ಥರು ಒಕ್ಕೊರಲಿನಿಂದ ವಿರೋಧಿಸಿದ್ದು, ಈ ಭಾಗದ ಜಲಮೂಲ ಹಾಗೂ ಕೃಷಿ ಚಟುವಟಿಕೆಗಳಿಗೆ ಮುಳುವಾಗಿರುವ ಸದ್ರಿ ಯೋಜನೆಯ ವಿರುದ್ಧ ಕಾನೂನು ಹೋರಾಟ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದರು.ಇದೇ ಸಂದರ್ಭ ಬಹುಗ್ರಾಮ ಯೋಜನೆಯ ಅನುಷ್ಠಾನದ ವಿರುದ್ಧ ಗ್ರಾಮಸ್ಥರು ಘೋಷಣೆಗಳನ್ನು ಕೂಗಿ ಪ್ರತಿಭಟನೆಯ ಕಾವು ಹೆಚ್ಚಿಸಿದರು. ಕುರ್ಕಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪೂಜಾರಿ, ಮಣಿಪುರ ಗ್ರಾಮದ ಹೋರಾಟ ಸಮಿತಿ ಮುಖ್ಯಸ್ಥ ಸಖಾರಾಮ ಶೆಟ್ಟಿ ದೆಂದೂರು, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಸಂಘಟನಾ ಕಾರ್ಯದರ್ಶಿ ಎಂ.ಜಿ.ನಾಗೇಂದ್ರ, ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಸುವರ್ಣ ಹೋರಾಟದಲ್ಲಿದ್ದರು.

Related posts

Leave a Reply

Your email address will not be published. Required fields are marked *