Header Ads
Header Ads
Breaking News

ಬಹುನಿರೀಕ್ಷಿತ ಕೋರಿ ರೊಟ್ಟಿ ತುಳು ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ

ರಾಕೆಟ್ ಕ್ರಿಯೇಶನ್ಸ್ ಬ್ಯಾನರ್ ಅಡಿ ನಿರ್ಮಿಸಲಾದ ಕೋರಿ ರೊಟ್ಟಿ  ತುಳು ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮವು ಉಡುಪಿಯ ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.ರಾಕೆಟ್ ಕ್ರಿಯೇಶನ್ಸ್ ಬ್ಯಾನರ್ ಅಡಿ ಸುಮಾರು 1 ಕೋಟಿ ರೂ ವೆಚ್ಚದಲ್ಲಿ ಕೋರಿ ರುಟ್ಟಿ ಚಿತ್ರವನ್ನು ನಿರ್ಮಿಸಲಾಗಿದ್ದು ಅಕ್ಟೋಬರ್26 ರಂದು ಉಡುಪಿ ಮಂಗಳೂರಿನಲ್ಲಿ ಚಿತ್ರ ಬಿಡುಗಡೆ ಆಗಲಿದೆ.

ಜನೀಶ್ ನಿರ್ದೇಶಿಸಿ ನಾಯಕ ನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಖ್ಯಾತ ನಿರೂಪಕಿ ಅನುಶ್ರಿ ಅಭಿನಯಿಸಿದ್ದು ಹಾಸ್ಯ ಚಕ್ರವರ್ತಿಗಳಾದ ಭೋಜರಾಜ್ ವಾಮಂಜೂರ್, ನವೀನ್ ಡಿಪಡೀಲ್, ಅರವಿಂದ ಬೋಳಾರ್, ಮಂಜು ರೈ, ಇರಾ ವಿಟ್ಲ ಅಭಿನಯಿಸಿದ್ದು ಪ್ರೇಕ್ಷಕ ವರ್ಗಕ್ಕೆ ಹಾಸ್ಯದ ಮನೋರಂಜನೆ ನೀಡಿದ್ದಾರೆ. ಇಂದು ಈ ಚಿತ್ರದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಚಿತ್ರದ ಬಗ್ಗೆ ನಿರ್ದೇಶಕ, ನಾಯಕ ರಜನೀಶ್ ಮಾಹಿತಿ ನೀಡಿದರು. ಅನ್ಸಾರ್ ಅಹಮದ್, ಇರ್ಪಾನ್ ಅಜೀಝ್ ಉಡುಪಿ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply