Header Ads
Header Ads
Breaking News

ಬಹು ಬೇಡಿಕೆಯ ಹೆಜಮಾಡಿ ಬಂದರು ನಿರ್ಮಾಣಕ್ಕೆ ಫಂಡ್ ಬಿಡುಗಡೆ

ಸುಮಾರು ನಲ್ವತ್ತು ವರ್ಷಗಳಿಂದಲೂ ಅಧಿಕ ಸಮಯದಿಂದ ಬಹು ಬೇಡಿಕೆಯ ಹೆಜಮಾಡಿ ಬಂದರು ನಿರ್ಮಾಣಕ್ಕೆ ಫಂಡ್ ಬಿಡುಗಡೆಗೊಂಡಿದ್ದು, ಈ ಹಿನ್ನಲೆಯಲ್ಲಿ ಉಡುಪಿ ಹಾಗೂ ಮಂಗಳೂರು ಜಿಲ್ಲಾಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿದ್ದರಾದರೂ, ಒಂದು ಮೂಲದಿಂದ ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಆರಂಭಿಕ ತೊಡಕು ಕಾಣಿಸಿಕೊಂಡಿದೆ.

ಈ ಬಗ್ಗೆ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ, ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳ ಗಡಿಭಾಗದಲ್ಲಿ ಈ ಬಂದರು ನಿರ್ಮಾಣವಾಗುವುದರಿಂದ ಮೀನುಗಾರರಿಗೆ ಬಹಳಷ್ಟು ಪ್ರಯೋಜನವಾಗಲಿದೆ, ಇಷ್ಟರಲ್ಲೇ ಅದಕ್ಕೆ ಫಂಡ್ ಬಿಡುಗಡೆಗೊಂಡಿದ್ದು, ಮುಂದಿನ ದಿನಗಳಲ್ಲಿ ಕೆಲಸ ಕೂಡ ಆರಂಭಗೊಳ್ಳಲಿದೆ ಎಂದರು.

ಮಂಗಳೂರು ಜಿಲ್ಲಾಧಿಕಾರಿಗಳುಮಾತನಾಡಿ, ಮಂಗಳೂರು ಭಾಗದಲ್ಲಿ ಈ ಬಂದರು ನಿರ್ಮಾಣಕ್ಕೆ ವಿರೋಧವಿದೆ, ಕಾರಣ ಬ್ರೇಕ್ ವಾಟರ್ ನಿರ್ಮಾಣದಿಂದ ಉಳ್ಳಾಲ ಮಾದರಿಯಲ್ಲಿ ಕಡಲು ಕೊರೆತ ಸಾಧ್ಯತೆ ಇದೆ ಎಂಬುದು ಅವರ ಅಭಿಪ್ರಾಯ, ಆ ಸಮಸ್ಯೆಯನ್ನು ತಿಳಿದುಕೊಳ್ಳುವುದಕ್ಕಾಗಿ ವ್ಯವಸ್ಥೆಯನ್ನು ಉಡುಪಿ ಜಿಲ್ಲಾಧಿಕಾರಿಗಳು ಮಾಡಿದ್ದು ಅದರ ವರದಿಯ ಆಧಾರದ ಮೇರೆಗೆ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

ಖಾಸಗಿ ಜಮೀನು ಈ ಭಾಗದಲ್ಲಿ ಇದೆ ಎಂಬ ಬಗ್ಗೆ ಮಾಹಿತಿ ಇದ್ದು ಪರಿಶೀಲನೆ ನಡೆಲು ಸುಮಾರು ಒಂದು ತಿಂಗಳು ಬೇಕಾಗ ಬಹುದು, ಆ ಹೊತ್ತಲ್ಲಿ ಮಂಗಳೂರು ಜಿಲ್ಲೆಯ ಜನರ ದೂರಿನ ಬಗೆಗಿನ ವರದಿಯೂ ನಮ್ಮ ಕೈಸೇರಲಿದ್ದು, ಯಾವುದೇ ಅಡೆತಡೆಗಳಿಲ್ಲದೆ ಆ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ ಎಂಬುದಾಗಿ ಉಡುಪಿ ಜಿಲ್ಲಾಧಿಕಾರಿ ಪ್ರೀಯಾಂಕ ಮೇರೆ ಸ್ಪಷ್ಟ ಪಡಿಸಿದ್ದಾರೆ. ಮಂಗಳೂರು ಜಿಲ್ಲೆಯ ಜನತೆಯ ದೂರಿನಂತೆ ಬಂದರು ನಿರ್ಮಾಣದಿಂದ ಸಮಸ್ಯೆ ಆಗುವುದೇ ಹೌದಾದರೆ ಬಂದರು ನಿರ್ಮಾಣ ಕನಸು ಕನಸಾಗಿಯೇ ಉಳಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತ್ತಿಲ್ಲ.

ಅಧಿಕಾರಿಗಳೊಂದಿಗೆ ಅವಳಿ ಜಿಲ್ಲಾಧಿಕಾರಿಗಳು ಯಂತ್ರದ ದೋಣಿಯೊಂದಿಗೆ ಸಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಅವಳಿ ಜಿಲ್ಲೆಗಳ ಕಂದಾಯ ಅಧಿಕಾರಿಗಳು ಪಾಲ್ಗೊಂಡಿದ್ದು ಮೀನುಗಾರ ಮುಖಂಡ ವಿಯಕ ಕರ್ಕೇರ ಅಧಿಕಾರಿಗಳಿಗೆ ಬಂದರಿಗಾಗಿ ನಡೆದ ಹೋರಾಟದ ಬಗ್ಗೆ ಮಾಹಿತಿ ನೀಡಿದ್ದಾರೆ.

Related posts

Leave a Reply