Header Ads
Header Ads
Breaking News

ಬಾಡಿಗೆ ನೀಡದೆ ಅಂಗಡಿ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಿ ಗೂಡಂಗಡಿ ನಡೆಸುವವರಿಗೆ ಕಾನೂನು ಪಾಲಿಸಲು ಹೇಳಿ ಕೊಣಾಜೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಆರೋಪ

ಮುಡಿಪು: ಕೊಣಾಜೆ ಪಂಚಾಯಿತಿ ಅಧೀನದಲ್ಲಿರುವ ಗ್ರಾಮದ ಹಲೆವೆಡೆ ಇರುವ ಅಂಗಡಿಗಳ ಮಾಲಿಕರು ಪಂಚಾಯಿತಿಗೆ ಬಾಡಿಗೆ ನೀಡದೆ ವಂಚಿಸುತ್ತಿದ್ದಾರೆ. ಆದರೂ ಪಂಚಾಯಿತಿ ಸುಮ್ಮನೆ ಕುಳಿತ್ತಿದ್ದು ಬಾಡಿಕೆ ಕಟ್ಟದಿರುವ ಅಂಗಡಿಗಳ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ರಸ್ತೆ ಬದಿಯಲ್ಲಿ ಗೂಡಂಗಡಿಗಳನ್ನು ಹಾಕಿ ತೊಂದರೆ ನೀಡುತ್ತಿರುವುವರಿಗಾದರೂ ಈ ಅಂಗಡಿಗಳನ್ನು ನೀಡಿ ಕಾನೂನು ಪಾಲಿಸಿ ಎಂದು ಕೊಣಾಜೆ ಗ್ರಾಮಸ್ಥರು ಆಗ್ರಹಿಸಿದರು.ಕೊಣಾಜೆ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಸೋಮವಾರದಂದು ಅಸೈಗೊಳಿಯ ಲಯನ್ಸ್ ಕ್ಲಬ್‌ನಲ್ಲಿ ನಡೆದಿದ್ದು ಈ ಸಂದರ್ಭದಲ್ಲಿ ಗ್ರಾಮಸ್ಥರು ಟ್ಯಾಂಕರ್ ನೀರು ಸರಬರಾಜು ಟೆಂಡರ್, ವಿದ್ಯುತ್ ಸಮಸ್ಯೆ, ಎಸ್‌ಸಿ ಎಸ್‌ಟಿ ಅನುದಾನ ಬಳಕೆ ಸಮಸ್ಯೆ ಸೇರಿದಂತೆ ಹಲವಾರು ವಿಚಾರಗಳ ಕುರಿತು ವಾಕ್ಸಮರ ನಡೆಸಿದರು. ಪಂಚಾಯಿತಿಯ ಅಧೀನದ ಕಟ್ಟಡಗಳಲ್ಲಿ ಅಂಗಡಿ ನಡೆಸುತ್ತಿರುವರು ಬಾಡಿಗೆ ನೀಡದೆ ವಂಚಿಸುತ್ತಿದ್ದಾರೆ ಮಾತ್ರವಲ್ಲದೆ ರಸ್ತೆ ಬದಿಗಳಲ್ಲಿ ಅದೆಷ್ಟೋ ಗೂಡಂಗಡಿಗಳು ನಿರ್ಮಾಣಗೊಂಡು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದರ ವಿರುದ್ದ ಪಂಚಾಯಿತಿ ಕ್ರಮಕೈಕೊಳ್ಳಬೇಕು. ಅಲ್ಲದೆ ಬಾಡಿಗೆ ಅಂಗಡಿಯವರ ವಿರುದ್ದ ಕ್ರಮ ಕೈಗೊಂಡು ಇಂತಹ ಗೂಡಂಗಡಿ ನಡೆಸುವವರಿಗಾದರೂ ಅವಕಾಶ ನೀಡಿದರೆ ಅವರು ಕೂಡಾ ನ್ಯಾಯಯುತವಾಗಿ ವ್ಯಾಪಾರ ನಡೆಸಬಹುದಲ್ಲವೇ ಎಂದು ಗ್ರಾಮಸ್ಥರು ಆರೋಪಿಸಿದರು. ಸಭೆಯಲ್ಲಿ ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ, ಜಿಲ್ಲಾ ಪಂಚಾಯಿತಿ ಸದಸ್ಯೆ ರಶೀದಾ ಬಾನು, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ ಪೂಜಾರಿ, ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಎಸ್ ರಾವ್, ಅಭಿವೃದ್ದಿ ಅಧಿಕಾರಿ ಸವಿತಾ, ಕಾರ್ಯದರ್ಶಿ ಶಾಲಿನಿ ಹಾಗೂ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Related posts

Leave a Reply