Header Ads
Header Ads
Breaking News

ಬಾಡಿಗೆ ಬಾಕಿ ಉಳಿಸಿದ ಎಂಟು ಅಂಗಡಿಗಳಿಗೆ ಗ್ರಾ.ಪಂ. ಬೀಗ

ಪಡುಬಿದ್ರಿ ಗ್ರಾಮ ಪಂಚಾಯಿತಿ ಅಂಗಡಿಕೋಣೆಯಲ್ಲಿ ಬಾಡಿಗೆಗೆ ಇದ್ದು ಇದೀಗ ಬಾಡಿಗೆ ನೀಡದೆ ಲಕ್ಷಾಂತರ ರೂಪಾಯಿ ಇರಿಸಿಕೊಂಡಿದ್ದ ಮಾರುಕಟ್ಟೆ ಪ್ರದೇಶದ ಆರು ಅಂಗಡಿ ಕೋಣೆಗಳಿಗೆ ಗ್ರಾ.ಪಂ. ನಿಯೋಗ ಬೀಗ ಜಡಿದಿದೆ.ಈ ಬಗ್ಗೆ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಂಚಾಕ್ಷರೀ ಸ್ವಾಮಿ, ಬಹಳಷ್ಟು ಬಾರಿ ಎಚ್ಚರಿಕೆ ನೀಡಿದರೂ ಕೇಳದ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ನಿರ್ಣಯದಂತ್ತೆ ಈ ಕಾರ್ಯಚರಣೆ ನಡೆಸಲಾಗಿದೆ, ಅದಲ್ಲದೆ ಮುಖ್ಯ ಮಾರುಕಟ್ಟೆ ರಸ್ತೆ ದ್ವಾರದ ಬಳಿಯಲ್ಲಿ ಟೆಂಟು ಹಾಕಿ ವ್ಯಾಪಾರ ನಡೆಸುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಆ ನಿಟ್ಟಿನಲ್ಲಿ ಅವರಿಗೆ ಮಾರುಕಟ್ಟೆ ಒಳಭಾಗದಲ್ಲಿ ವ್ಯಾಪಾರ ನಡೆಸಲು ಸ್ಥಳಾವಕಾಶ ನೀಡಲಾಗಿದೆ, ಮುಂದಿನ ಎರಡು ದಿನಗಳಲ್ಲಿ ನಾವು ಸೂಚಿಸಿದ ಸ್ಥಳಕ್ಕೆ ಸ್ಥಾಳಾಂತರಗೊಳ್ಳದಿದ್ದಲ್ಲಿ ಗ್ರಾ.ಪಂ. ನಿರ್ಣಯದಂತ್ತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಾಗೂ ಮರುಕಟ್ಟೆ ರಸ್ತೆಯಲ್ಲಿ ಚರಂಡಿ ಸಹಿತ ರಸ್ತೆಯಲ್ಲೇ ಸಾಮಾಗ್ರಿಗಳನ್ನು ಇರಿಸಿ ವ್ಯಾಪಾರ ನಡೆಸುತ್ತಿರುವರಿಗೆ ಗರಿಷ್ಠ ಮೊತ್ತದ ದಂಡನೆ ವಿಧಿಸಲಾಗುವುದು ಈ ಬಗ್ಗೆ ಈ ಮುಂಚೆಯೆ ಎಚ್ಚರಿಕೆ ನೀಡಲಾಗಿದೆ ಎಂದರು.

ಗ್ರಾ.ಪಂ. ನಿರ್ಣಯಕ್ಕೆ ರಾಜಕೀಯ ಕೈಯಾಡಿಸಿದೆ ಎಂಬಆರೋಪಕ್ಕೆ ಸ್ಪಷ್ಟನೆ ನೀಡಿದ ಶಾಸಕ ಲಾಲಾಜಿ ಆರ್. ಮೆಂಡನ್, ಬೀಗ ಹಾಕಲಾದ ಒಂದು ಮೊಬೈಲ್ ಅಂಗಡಿಯಾತ ನೀಡಿದ ಮುಂಗಡ ಹಣ ಗ್ರಾ.ಪಂ.ನಲ್ಲಿ ಇದ್ದ ಕಾರಣ ಕೆಲದಿನಗಳ ರಿಯಾಯಿತಿ ನೀಡುವಂತ್ತೆ ಹೇಳಿದ್ದೇನೆ ವಿನಃ ಗ್ರಾಮದ ಒಳಿತಿಗಾಗಿ ಗ್ರಾ.ಪಂ. ನಡೆಸುತ್ತಿರುವ ಯಾವುದೇ ಕಾರ್ಯಚರಣೆಗೆ ನಾನು ಅಡ್ಡಿ ಪಡಿಸಿಲ್ಲ, ಪಡಿಸುವುದು ಕೂಡಾ ಇಲ್ಲ ಎಂದಿದ್ದಾರೆ.

Related posts

Leave a Reply

Your email address will not be published. Required fields are marked *