Header Ads
Header Ads
Header Ads
Breaking News

ಬಾಡಿಗೆ ಮನೆಯಲ್ಲಿರುವ ನಿವೇಶನ ರಹಿತರಿಗೆ ವಸತಿ ಯೋಜನೆ : ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿರುವ ನಿವೇಶನ ರಹಿತರಿಗೆ ವಸತಿ ಯೋಜನೆಗೆ ಸರಳೇಬೆಟ್ಟು ಹೆರ್ಗ ಗ್ರಾಮದಲ್ಲಿ 6.79 ಎಕರೆ ಸೇರಿದಂತೆ ಮೂರು ಕಡೆ ಜಾಗವನ್ನು ಈ ಹಿಂದೆ ಕಾಂಗ್ರೆಸ್ ಸರ್ಕಾರ ಗುರುತಿಸಿತ್ತು. ಪ್ರಸ್ತುತ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮನೆಗಳ ನಿರ್ಮಾಣ ಯೋಜನೆ ಶಿಲನ್ಯಾಸ ನಡೆಯಲಿದ್ದು 2018ರಲ್ಲಿ ಆಯ್ಕೆಯಾದ ಎಲ್ಲಾ 679 ಫಲಾನುಭವಿಗಳಿಗೆ ಮನೆ ನೀಡುವುದು ಜಿಲ್ಲಾಧಿಕಾರಿಗಳ ಜವಾಬ್ಧಾರಿ ಅಂತ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ 60 ಸಾವಿರ ಮತ್ತು ಸಾಮಾನ್ಯ ವರ್ಗಕ್ಕೆ 90 ಸಾವಿರ ನಿಗದಿ ಮಾಡಲಾಗಿದೆ. ಫಲಾನುಭವಿಗಳು ತಮ್ಮ ಪಾಲಿನ ವಂತಿಕೆಗಳನ್ನು ಏಕ ಗಂಟಿನಲ್ಲಿ ಕಟ್ಟದಿದ್ದರೆ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕಂತು ಕಟ್ಟಲೂ ಸಾಮರ್ಥ್ಯ ಇಲ್ಲದವರೇ ನಿಜವಾದ ಬಡವರಾಗಿದ್ದು ಅವರಿಗೇ ಪ್ರಥಮ ಆದ್ಯತೆ ನೀಡಬೇಕು. ಕಂತಿನ ರೂಪದಲ್ಲಿ ಹಣ ಕಟ್ಟಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

Related posts

Leave a Reply

Your email address will not be published. Required fields are marked *