Header Ads
Header Ads
Header Ads
Breaking News

ಬಾದ್ರಪದ ಶುಕ್ಲ ಚತುದರ್ಶಿಯಂದು ಬರುವ ಅನಂತ ಚತುದರ್ಶಿ ಕುಮಟಾದ ಧಾರೇಶ್ವರ ಪಂಚಾಕ್ಷರಿ ಕುಟುಂಬದಿಂದ ಆಚರಣೆ

ಪರಂಪರಾಗತವಾಗಿ ನಡೆದು ಬರುತ್ತಿರುವ ಅದೆಷ್ಟೋ ಹಬ್ಬಗಳ ನಡುವೆ ಒಂದು ವಿಶೇಷ ಹಬ್ಬವೆಂದರೆ ಅದು ಭಾದ್ರಪದ ಶುಕ್ಲ ಚತುರ್ದರ್ಶಿಯಂತು ಬರುವ ವಿಶೇಷ ಅನಂತ ಚರ್ತುದಶೀಯಾಗಿದೆ.

ತಲತಲಾಂತರದಿಂದ ಶ್ರದ್ಧೆ ಭಕ್ತಿಯಿಂದ ನಡೆಸಿಕೊಂಡು ಬರುತ್ತಿರುವ ಕುಮಟಾದ ಧಾರೇಶ್ವರದ ಪಂಚಾಕ್ಷರಿ ಅಡಿ ಕುಟುಂಬ. ಈ ವರ್ಷ ಮಂಗಳವಾರ ಹಾಗೂ ಬುಧವಾರದಂದು ವೃತದ ಆಚರಣೆಯು ನಡೆಸಿದ್ದು ಅದ್ದೂರಿ ಅಲಂಕಾರ, ವಿಶೇಷ ಭಜನೆ ಕಾರ್ಯಕ್ರಮವೂ ಆಕರ್ಷಣೆಯಾಗಿತ್ತು.

ಭಾದ್ರಪದ ಶುದ್ಧ ಶುಕ್ಲ ಪಕ್ಷದ ಚೌತಿಯಂದು ಗಣೇಶ ಚತುರ್ಥಿ ಹಬ್ಬ ಆಚರಿಸಲ್ಪಡುವ ಹಾಗೇ ಅಲ್ಲಿಂದ ಸರಿಯಾಗಿ ೧೫ ದಿನದ ಬಳಿ ಅನಂತ ಚತುರ್ಧಶಿ ಹಬ್ಬ ಬರಲಿದ್ದು, ಹಲವು ವಿಶೇಷತೆಗಳನ್ನು ಪಡೆದಿದೆ. ಅಬ್ಬರದ ಉಳಿದ ಹಬ್ಬಗಳ ಸರಮಾಲೆಯಲ್ಲಿರುವ ಮುಖ್ಯ ಹಬ್ಬ ಅನಂತ ಚತುರ್ದಶಿಯಾಗಿದೆ. ಆದರೆ ಆಚರಣೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇಂತಹ ವಿಶೇಷ ಅಪರೂಪದ ಹಬ್ಬವನ್ನು ಕುಮಟಾ ತಾಲೂಕಿನ ಧಾರೇಶ್ವರದ ಪಂಚಾಕ್ಷರಿ ಶಂಕರ ಅಡಿ ಕುಟುಂಬವೂ ಕಳೆದ ಮೂರು ತಲೆಮಾರುಗಳಿಂದ ನಡೆಸಿಕೊಂಡು ಬರುತ್ತಿದ್ದು, ವೃತವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.

ವರದಿ: ರಾಘವೇಂದ್ರ ಮಲ್ಯ , ಭಟ್ಕಳ.

Related posts

Leave a Reply