Header Ads
Header Ads
Breaking News

ಬಾಬರೀ ಧ್ವಂಸ ಸಂದರ್ಭದಲ್ಲಿ ಬೇಡವಾದ ಸೌಹಾರ್ದ ಈಗ ಯಾಕೆ, ಪೇಜಾವರ ಶ್ರೀ ರಾಜಕೀಯಕ್ಕೆ ಮಂಗಳೂರಿನಲ್ಲಿ ಶ್ರೀರಾಮ ಸೇನೆ ಪ್ರಶ್ನೆ

ಬಾಬರೀ ಧ್ವಂಸ ಸಂದರ್ಭದಲ್ಲಿ ಬೇಡವಾದ ಸೌಹಾರ್ದ ಪೇಜಾವರ ಸ್ವಾಮಿಗೆ ಈಗ ಯಾಕೆ, ೫೦ ವರ್ಷಗಳ ಹಿಂದೆ ಈ ಪ್ರಯತ್ನ ಮಾಡಿದ್ದಲ್ಲಿ ಹಿಂದೂ ಮುಸ್ಲಿಂ ನಡುವೆ ದ್ವೇಷ ಉಂಟಾಗುತ್ತಿರಲಿಲ್ಲ, ಇದೀಗ ಇಫ್ತಾರ್ ಕೂಟವನ್ನು ಆಯೋಜಿಸುವ ಮೂಲಕ ಶ್ರೀಗಳು ಧರ್ಮದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕೆಂದು ಅಂತಾ ಶ್ರೀರಾಮ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಾಲ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಹಿಂದೂ ಹುಡುಗರನ್ನು ತನ್ನ ರಾಜಕೀಯ ಲಾಭಕ್ಕಾಗಿ ಅನ್ಯಮತೀಯರ ವಿರುದ್ಧ ಎತ್ತಿ ಕಟ್ಟುತ್ತಿದ್ದು, ಹಿಂದೂ ಹುಡುಗರನ್ನು ಕಾನೂನು ಬಾಹಿರವಾಗಿ ಕೆಲಸ ಮಾಡಿಸುತ್ತಿದ್ದುದನ್ನು ಯಾರೂ ಮರೆತಿಲ್ಲ. ಆದರೆ ಇವತ್ತು ಸಭ್ಯನಂತೆ ವರ್ತಿಸುವುದನ್ನು ಪಕ್ಷ ಲೇವಡಿ ಮಾಡುತ್ತಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎರಡೂ ರಾಜಕೀಯ ಪಕ್ಷಗಳು ಜಿಲ್ಲೆಯಲ್ಲಿ ನಡೆಯುವ ಗಲಭೆಗೆ ಕಾರಣವಾಗಿವೆ ಎಂದು ಶ್ರೀರಾಮ ರಾಜ್ಯ ಪ್ರದಾನ ಕಾರ್ಯದರ್ಶಿ ಪ್ರವೀಣ್ ವಾಲ್ಕೆ ದೂರಿದರು.
ಇನ್ನು ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದು, ಮಠದ ಪಾವಿತ್ರ್ಯತೆಗೆ ಧಕ್ಕೆ ತಂದಿರುವುದನ್ನು ವಿರೋಧಿಸಿ ಜುಲೈ ೨ರಂದು ನಗರದ ಲಾಲ್ ಭಾಗ್ ವೃತ್ತದ ಬಳಿ ಪ್ರತಿಭಟನೆ ಮಾಡಲಾಗುವುದು ಎಂದು ಹಿಂದೂ ಮಹಾಸಭಾ ರಾಜ್ಯ ವಕ್ತಾರ ಧರ್ಮೇಂದ್ರ ಹೇಳಿದರು.

Related posts

Leave a Reply