Header Ads
Header Ads
Breaking News

ಬಾರ್ಕೂರು ಏಕನಾಥೇಶ್ವರಿ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ:ದೇವರ ಸನ್ನಿಧಿಯಲ್ಲಿ ತುಲಾಭಾರ ಸೇವೆ, ಅನ್ನಸಂತರ್ಪಣೆ

ಬಾರ್ಕೂರಿನಲ್ಲಿ ಪ್ರತಿಷ್ಟಾಪಿಸಲ್ಪಟ್ಟಿರುವ ದೇವಾಡಿಗ ಸಮಾಜದ ಕುಲದೇವಿ ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿ ಪ್ರಥಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿವಿಧ ದಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಬಾರ್ಕೂರಿನಲ್ಲಿ ಪ್ರತಿಷ್ಟಾಪಿಸಲ್ಪಟ್ಟಿರುವ ದೇವಾಡಿಗ ಸಮಾಜದ ಕುಲದೇವಿ ಶ್ರೀ ಏಕನಾಥೇಶ್ವರಿ ದೇವಸ್ಥಾನ ದಲ್ಲಿ ಪ್ರಥಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಸಾಮೂಹಿಕ ಚಂಡಿಕಾಯಾಗ ನಡೆಯಿತು. ಸಂಕಲ್ಪ ಸೇವೆಯಲ್ಲಿ ಸಮಾಜಜದ ನೂರಾರು ಮಂದಿ ಭಾಗವಹಿಸಿ ಇಷ್ಟಾರ್ಥ ಸಿದ್ದಿ ಸಂಕಲ್ಪ ಕೈಗೊಂಡರು. ಇದೇ ಸಂದರ್ಬದಲ್ಲಿ ವಧು-ವರರ ನೋಂದಣಿ ಮತ್ತು ವಧು-ವರ ಅನ್ವೇಷಣೆ ಕೂಡಾ ನಡೆದಿದ್ದು ನೂರಾರು ವಧು ವರರು ಭಾಗವಹಿಸಿದರು. ದೇವಿಯ ಸನ್ನಿದಿ ತುಲಾಭಾರ ಸೇವೆ, ಅನ್ನಸಂತರ್ಪಣೆ ಬಹು ವಿಜೃಂಭಣೆಯಿಂದ ನಡೆಯಿತು .ಸಮಾಜದ ಅನೇಕ ಹಿರಿಯರು ಗಣ್ಯರು ಭಾಗವಹಿಸಿದ್ದು ಉದ್ಯಮಿ ಹರೀಶ್ ಶೇರಿಗಾರ್ ದುಬೈ, ಮುಂಬೈನ ಧರ್ಮಪಾಲ ದೇವಾಡಿಗ, ಜನಾರ್ಧನ ಬಿ ದೇವಾಡಿಗ ಉಪಾಧ್ಯಕ್ಷರು ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು , ನರಸಿಂಹ ಬಿ ದೇವಾಡಿಗ ಉಡುಪಿ ಪ್ರಧಾನ ಕಾರ್ಯದರ್ಶಿ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ , ಗಣೇಶ ದೇವಾಡಿಗ ಅಂಬಲಪಾಡಿ ಗೌರವ ಕಾರ್ಯದರ್ಶಿ ಶ್ರೀ ಏಕನಾಥೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಬಾರ್ಕುರು, ಜನಾರ್ದನ ಪಡುಪಣಂಬೂರು ಆಡಳಿತಾಧಿಕಾರಿ ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರಕೂರು ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *