Breaking News

ಬಾರ್ಸಿಲೋನಾ ಗ್ರಾನ್‌ಪ್ರಿ ಫಾರ್ಮುಲಾ ಕಾರು ರೇಸ್,  ಅಂತಿಮವಾಗಿ ವೆಟಲ್ ಬೀಳಿಸಿ ಗೆದ್ದ ಹ್ಯಾಮಿಲ್ಟನ್

ಲೂಯಿಸ್ ಹ್ಯಾಮಿಲ್ಟನ್ ಅವರು ಬಾರ್ಸಿಲೋನಾ ಇಲ್ಲಿ ನಡೆದ ಸ್ಪ್ಯಾನಿಷ್ ಗ್ರ್ಯಾನ್ ಪ್ರಿ ಫಾರ್ಮುಲಾ-೧ ರೇಸ್ನಲ್ಲಿ ಚಾಂಪಿಯನ್ ಆಗಿದ್ದಾರೆ.
ಮರ್ಸಿಡೀಸ್ ತಂಡವನ್ನು ಪ್ರತಿನಿಧಿಸಿದ್ದ ಮೂರು ಬಾರಿಯ ವಿಶ್ವ ಚಾಂಪಿಯನ್ ಹ್ಯಾಮಿಲ್ಟನ್ ೬೬ ಲ್ಯಾಪ್ಗಳ ಸ್ಪರ್ಧೆಯಲ್ಲಿ ೩.೫ ಸೆಕೆಂಡುಗಳಿಂದ ಜರ್ಮನಿಯ ಚಾಲಕ ಸೆಬಾಸ್ಟಿಯನ್ ವೆಟಲ್ ಅವರನ್ನು ಹಿಂದಿಕ್ಕಿದರು. ಈ ಮೂಲಕ ವೃತ್ತಿಬದುಕಿನ ೫೫ನೇ ಪ್ರಶಸ್ತಿ ಎತ್ತಿಹಿಡಿದರು. ಹ್ಯಾಮಿಲ್ಟನ್ ಈ ಋತುವಿನಲ್ಲಿ ಗೆದ್ದ ಎರಡನೇ ಟ್ರೋಫಿ ಇದಾಗಿದೆ. ೪೪ನೇ ಲ್ಯಾಪ್ನವರೆಗೂ ವೆಟಲ್ ಮುಂಚೂಣಿಯಲ್ಲಿದ್ದರು. ಅನಂತರ ವೇಗ ಹೆಚ್ಚಿಸಿಕೊಂಡು ಕಾರು ಚಲಾಯಿಸಿದ ಹ್ಯಾಮಿಲ್ಟನ್ ಯಾವುದೇ ಹಂತದಲ್ಲಿಯೂ ಪ್ರತಿಸ್ಪರ್ಧಿಗೆ ಮುನ್ನಡೆ ಬಿಟ್ಟುಕೊಡಲಿಲ್ಲ. ಹೀಗಾಗಿ ಫೆರಾರಿ ತಂಡದ ವೆಟಲ್ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ರೆಡ್ಬುಲ್ ತಂಡದ ಡೇನಿಯಲ್ ರಿಕಿ ಯಾರ್ಡೊ ಮೂರನೇಯವರಾಗಿ ಗುರಿ ಕ್ರಮಿಸಿದರು. ಫೋರ್ಸ್ ಇಂಡಿಯಾ ತಂಡದ ಸರ್ಜಿಯೊ ಪೆರೆಜ್ ಮತ್ತು ಎಸ್ಟೆಬನ್ ಒಕಾನ್ ಅವರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು. ಇದು ಈ ಋತುವಿನಲ್ಲಿ ಫೋರ್ಸ್ ಇಂಡಿಯಾ ತಂಡದ ಉತ್ತಮ ಸಾಧನೆ ಅನಿಸಿತು.

Related posts

Leave a Reply