Breaking News

ಬಾರ್ ಅನುಮತಿ ನೀಡಬಾರದೆಂದು ವಿರೋಧಿಸಿ ಗ್ರಾಮ ಪಂಚಾಯತಗೆ ಮನವಿ

ಕುಂದಾಪುರಕ್ಕೆ: ಇಲ್ಲಿನ ಕೋಟೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ಬಾರ್‌ಗೆ ಅನುಮತಿ ಕೊಡುವುದನ್ನು ವಿರೋಧಿಸಿ ಕೋಟೇಶ್ವರ ಪಂಚಾಯತ್ಗೆ ಸಾರ್ವಜನಿಕರು ಪಂಚಾಯತ್ ಅಧ್ಯಕ್ಷರು ಜಾನಕಿಬಿಲ್ಲವರಿಗೆ ಮತ್ತು ಪಂಚಾಯತ್ ಅಭಿವೃದ್ಧಿಕಾರಿಗೆ ಮನವಿ ಸಲ್ಲಿಸಿದರು.ಕೋಟೇಶ್ವರದ ಜನನಿಬಿಡ ಪ್ರದೇಶದಲ್ಲಿ ನೀವು ಅನುಮತಿಸಲು ಉದ್ದೇಶಿಸಿರುವ ಬಾರ್ ಬರಲಿದೆ. ಪಕ್ಕದಲ್ಲಿ ದೇವಸ್ಥಾನ ಮದುವೆ ಮಂಟಪ ಐಟಿ‌ಐ ಕಾಲೇಜು ಮತ್ತು ಶಾಲೆ ಕೂಡ ಇದೆ. ಆದ್ದರಿಂದ ಇಲ್ಲಿ ಬಾರ್ ತೆರೆದರೆ ಸಾರ್ವಜನಿಕರು ಮಹಿಳೆಯರು ಓಡಾಡದ ಪರಿಸ್ಥಿತಿ ಉಂಟಾಗುತ್ತದೆ ಮತ್ತು ಯುವ ಜನಾಂಗವು ದುಷ್ಟಚಟಗಳಿಗೆ ಮಾರು ಹೋಗುವ ಸಾಧ್ಯತೆ ಇದೆ ಆದ್ದರಿಂದ ಇಲ್ಲಿ ಅನುಮತಿ ನೀಡಬಾರದು ಎಂದು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಅನುಮತಿ ನೀಡಿದರೆ ಉಗ್ರವಾದ ಹೋರಾಟ ನೆಡುಸುವುದುದಾಗಿ ಎಚ್ಚರಿಸಿದರು.ಈ ಸಂದರ್ಭ ಮಾತನಾಡಿದ ಪಂಚಾಯತ್ ಅಧ್ಯಕ್ಷೆ ಜಾನಕಿ ಬಿಲ್ಲವ ಸಾರ್ವಜನಿಕ ರಿಂದ ವಿರೋಧ ಬಿದ್ದಾಗ ನಾವು ಯಾವುದೇ ಕಾರಣ ಅನುಮತಿ ನೀಡುವುದಿಲ್ಲ ಎಂದು ಸಾರ್ವಜನಿಕ ರನ್ನು ಸಮಾಧಾನಿಸಿದರು

Related posts

Leave a Reply