Header Ads
Header Ads
Header Ads
Breaking News

ಬಾಲಕರ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳ ದಾಂಧಲೆ ಫ್ಯಾನು-ಕುರ್ಚಿಗಳು-ಪೈಪುಗಳು ಧ್ವಂಸ ಕುಂದಾಪುರದ ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ನಿಲಯ

 

ಕುಂದಾಪುರ: ಮೆಟ್ರಿಕ್ ಪೂರ್ವ ಪ,ಜಾ, ಪ.ಪಂ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳು ನಡೆಸಿದ ದಾಂದಲೆಯಿಂದ ವಿದ್ಯಾರ್ಥಿನಿಲಯದ ಕುರ್ಚಿ, ಫ್ಯಾನು, ಪೈಪ್‌ಗಳು ಹಾನಿಗೊಂಡ ಘಟನೆ ಗುರುವಾರ ನಡೆದಿದೆ.
ಇಲ್ಲಿನ ಸಾರ್ವಜನಿಕ ಮೆಟ್ರಿಕ್‌ಪೂರ್ವ ಪ.ಜಾತಿ ಹಾಗೂ ಪ.ವರ್ಗದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ತಾತ್ಕಾಲಿಕವಾಗಿ ವಸತಿ ವ್ಯವಸ್ಥೆಯಲ್ಲಿದ್ದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸರಿಯಾದ ಸರಿಯಾದ ಬಾಡಿಗೆ ವಸತಿ ವ್ಯವಸ್ಥೆ ಸಿಗದೇ ಇಲ್ಲದೇ ಇರುವುದರಿಂದ ಅವರನ್ನು ಮೆಟ್ರಿಕ್ ಪೂರ್ವ ವಸತಿ ನಿಲಯದ ಮೇಲಂತಸ್ತಿನಲ್ಲಿರುವ ಕಟ್ಟಡದಲ್ಲಿ ವಸತಿ ಕಲ್ಪಿಸಲಾಗಿತ್ತು.

ಈ ವಿದ್ಯಾರ್ಥಿಗಳಿಗೆ ಸುಮಾರು ಕೋಣೆಗಳನ್ನು ಅವರ ವ್ಯವಸ್ಥೆಗಾಗಿ ಖಾದಿರಿಸಲಾಗಿತ್ತು. ಇಲ್ಲಿನ ಸುಮಾರು ೫೦ ಮಂದಿಗೆ ಮಾತ್ರ ಇದ್ದ ಸ್ಥಳವಾಕಾಶದಲ್ಲಿ ೧೦೭ ಮಂದಿ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲಾಗಿದ್ದು, ಈ ಹಿನ್ನೆಲೆ ಬೇರೆ ವಸತಿ ವ್ಯವಸ್ಥೆಗಾಗಿ ಇಲಾಖೆ ಹುಡುಕಾಟವನ್ನೂ ಕೂಡ ನಡೆಸಲಾಗಿತ್ತು. ಅಲ್ಲದೆ ಇತ್ತಿಚೆಗೆ ವಸತಿನಿಲಯಕ್ಕೆ ಭೇಟಿ ನೀಡಿದ ಜಂಟಿ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳು ಆದಷ್ಟು ಕೂಡಲೇ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಸ್ಥಳಾಂತರ ಸಂದರ್ಭ ವಾರ್ಡ್‌ನ ಸೇರಿದಂತೆ ಇತರ ಅಧಿಕಾರಿಗಳು ಇಲ್ಲದೆ ಇರುವುದನ್ನು ಕಂಡು ಕೆಲ ಪುಂಡು ವಿದ್ಯಾರ್ಥಿಗಳು ವಸತಿ ಕೋಣೆಯ ಫ್ಯಾನುಗಳು, ಟ್ಯೂಬ್‌ಲೈಟ್‌ಗಳು, ಕುರ್ಚಿಗಳು, ಬಾತ್‌ರೂಮಿನ ಪೈಪುಗಳಿಗೆ ಹಾನಿ ಉಂಟು ಮಾಡಿದ್ದಲ್ಲದೇ ವಸತಿ ನಿಲಯದ ಕೋಣೆಗಳ ಗೋಡೆಯ ಮೇಲೆ ಬೇಕಾಬಿಟ್ಟಿಯಾಗಿ ಬರೆದು ದಾಂಧಲೆ ನಡೆಸಿದ್ದಾರೆ.
ಈ ಕುರಿತು ಸಾರ್ವಜನಿಕ ಮೆಟ್ರಿಕ್ ಪೂರ್ವ ವಸತಿ ನಿಲಯದ ಮೇಲ್ವಿಚಾರಕಿ ವಿ.ಲಕ್ಷ್ಮಿ ಅವರು ಈ ಕುರಿತು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Related posts

Leave a Reply