Header Ads
Header Ads
Breaking News

ಬಾಲಕಿಗೆ ಅನಗತ್ಯವಾಗಿ ಕರೆ ಮಾಡಿ ಕಿರುಕುಳ:ಆರೋಪಿಗಳ ವಿರುದ್ಧ ಪೊಸ್ಕೋ ಪ್ರಕರಣ ದಾಖಲು

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಹೆಜಮಾಡಿ ಗ್ರಾಮ ಲೆಕ್ಕಿಗ ಹಾಗೂ ಆತನ ಈ ಕೃತ್ಯಕ್ಕೆ ಸಹಕರಿಸಿದ ಹೆಜಮಾಡಿ ಗ್ರಂಥ ಪಾಲಕಿಯ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪೊಸ್ಕೋ ಖಾಯಿದೆಯಡಿ ಪ್ರಕರಣ ದಾಖಲಾಗಿದೆ.ಜಾಗದ ವಿಚಾರಕ್ಕೆ ಸಂಬಂಧಿಸಿ ಪರಿಚಯವಾಗಿ ಬಾಲಕಿಯ ಮೊಬೈಲ್ ಸಂಖ್ಯೆ ಪಡೆದ ವಿಕೃತಕಾಮಿ ಅನಗತ್ಯವಾಗಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದಲ್ಲದೆ. ನನಗೆ ವಯಸ್ಸು 27ಕಾರು ಸಹಿತ ಎರಡು ಕೋಟಿಯ ಮನೆ ಇದೆ, ನಿನ್ನನ್ನು ಮದುವೆಯಾಗುತ್ತೇನೆ.ನಿನ್ನ ನಗ್ನ ಬಾವಚಿತ್ರ ಕಳುಹಿಸು ಎಂಬುದಾಗಿ ನಿರಂತರ ಹಿಂಸೆ ನೀಡುವ ಮೂಲಕ ದೌರ್ಜನ್ಯ ಎಸಗಿದ್ದಾನೆ ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆತನ ಈ ಕೃತ್ಯಕ್ಕೆ ಸಹಕರಿಸಿದ ವಿವಾಹಿತ ಮಹಿಳೆ ಕಿಶೋರಿ ಎಂಬಾಕೆ ಹೆಜಮಾಡಿಯ ಗ್ರಂಥ ಪಾಲಕಿಯಾಗಿದ್ದು, ತನ್ನ ಕರ್ತವ್ಯ ಮರೆತ ಆಕೆ ಗ್ರಂಥಾಲಯಕ್ಕೆ ಬೀಗ ಜಡಿದು ಪಕ್ಕದಲ್ಲೇ ಇರುವ ಆತನ ಕಛೇರಿಯಲ್ಲಿ ಆತನ ಸಹಾಯಕಿಯಾಗಿ ದುಡಿಯುತ್ತಿರುವ ಬಗ್ಗೆ ಈ ಹಿಂದೆಯೇ ಗ್ರಾಮಸ್ಥರಿಂದ ದೂರುಗಳು ಕೇಳಿ ಬರುತ್ತಿತ್ತು.ಆದರೆ ಅಧಿಕಾರಿಗಳು ಮೌನ ವಹಿಸಿದ್ದರಿಂದ ಈ ದುರ್ಘಟನೆ ಸಂಭವಿಸುವಂತ್ತಾಯಿತು ಎಂಬುದಾಗಿ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿದ ಗ್ರಾಮಸ್ಥರು ಅಧಿಕಾರಿಗಳ ನಿರ್ಲಕ್ಯದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಬಾಲಕಿಗೆ ನೀಡುತ್ತಿರುವ ಕಿರುಕಳದ ಬಗ್ಗೆ ಗ್ರಾಮದ ಪ್ರಮುಖರನೇಕರು ಸೇರಿ ಆಕೆ ಸುದ್ಧಿಗೆ ಬಾರದಂತೆ ದೂರವಾಣಿ ಮೂಲಕ ತಿಳಿಸಿದರೂ ಕೇಳದ ಆತ, ನಾನು ನಿಮ್ಮೊಂದಿಗೆ ಮಾತನಾಡುವ ಅಗತ್ಯವಿಲ್ಲ, ನನ್ನ ಸಹೋದರ ಎಮ್‌ಎಲ್‌ಎ, ನನ್ನ ಕುಟುಂಬದಲ್ಲಿ ಐಎಎಸ್-ಐಪಿಎಸ್‌ಗಳೇ ಇರುವುದು ಠಾಣೆಗೆ ಬಂದು ಹೇಳುತ್ತೇನೆ, ನನ್ನ ವಿರುದ್ಧ ದೂರು ನೀಡಿದರೆ ಹೆಜಮಾಡಿ ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕುತ್ತಾರೆ ಮಾತ್ರವಲ್ಲ ಎಸ್ಪಿ,ಡಿಸಿ, ತಹಶೀಲ್ದಾರ್ ತಕ್ಷಣ ಠಾಣೆಗೆ ಬರುತ್ತಾರೆ ಎಂಬುದಾಗಿ ದರ್ಪದ ಮಾತನ್ನು ಆಡಿದ್ದ ಎನ್ನಲಾಗಿದೆಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡೆಸಲಾಗಿದೆ.

Related posts

Leave a Reply