Header Ads
Header Ads
Breaking News

5ನೇ ತರಗತಿ ಕಲಿಯುತ್ತಿದ್ದ ಬಾಲಕಿಯೋರ್ವಳು ನೇಣು ಬಿಗಿದು ಅತ್ಮಹತ್ಯೆ

5ನೇ ತರಗತಿ ಕಲಿಯುತ್ತಿದ್ದ ಬಾಲಕಿಯೋರ್ವಳು ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಐಕಳ ಕಮ್ಮಾಜೆಯಲ್ಲಿ ಬುಧವಾರ ನಡೆದಿದೆ. ಅತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ದ್ರುವಿ (10) ಎಂದು ಗುರುತಿಸಲಾಗಿದೆ. ಬಾಲಕಿ ದ್ರುವಿ ಕಿನ್ನಿಗೋಳಿಯ ಸೈಂಟ್ ಮೇರಿಸ್ ಅಂಗ್ಲ ಮಾಧ್ಯಮ ಶಾಲೆಯಲ್ಲಿ 5 ನೇ ತರಗತಿ ಕಲಿಯುತ್ತಿದ್ದು ಇಂದು ಕಿರೆ ಚರ್ಚ್‍ನ ವಾರ್ಷಿಕ ಹಬ್ಬದ ಕಾರಣ ಶಾಲೆಗೆ ರಜೆ ಇತ್ತು. ಬುಧವಾರ ಸಂಜೆ ದ್ರುವಿ ಮತ್ತು ದ್ರುವಿಯ ಅಜ್ಜಿ ಮನೆಯಲ್ಲಿ ಇದ್ದು ಟಿ.ವಿ ನೋಡುತ್ತಿದ್ದು ಆಗ ಕರೆಂಟ್ ಹೋಯಿತು. ಈ ಸಂದರ್ಭ ಅಜ್ಜಿ ದ್ರುವಿಗೆ ಒದುವಂತೆ ಸೂಚಿಸಿದ್ದಾರೆ. ದ್ರುವಿ ಕೋಣೆಗೆ ಹೋದವಳು ಕರೆಂಟ್ ಬರುವಾಗಲೂ ಹೊರಗೆ ಬರದ ಕಾರಣ ಕೋಣೆಯಲ್ಲಿ ನೋಡುವಾಗ ಅತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಲೆಗೆ ಕಟ್ಟುವ ರಿಬ್ಬನ್‍ನನ್ನು ಕೊಣೆಯ ಕಿಟಕಿಗೆ ಕಟ್ಟಿ ಕುತ್ತಿಗೆಗೆ ಹಾಕಿ ಅತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೂಲ್ಕಿ ಪೋಲಿಸರು  ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *