Header Ads
Header Ads
Breaking News

ಬಾಲಕ ಬಾಲಕಿಯರ ವಲಯ ಮಟ್ಟದ ಕಬಡ್ಡಿ ಪಂದ್ಯಾಕೂಟ. ಎರ್ಮಾಳು ಬೋರ್ಡ್ ಶಾಲಾ ಮೈದಾನದಲ್ಲಿ ಆಯೋಜನೆ.

ತೆಂಕ ಎರ್ಮಾಳು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದದಲ್ಲಿ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಪಡುಬಿದ್ರಿ ವಲಯ ಮಟ್ಟದ ಕಬಡ್ಡಿ ಪಂದ್ಯಾಕೂಟ ಗ್ರಾಮಸ್ಥರ ಹಾಗೂ ಹಳೆವಿದ್ಯಾರ್ಥಿಗಳ ಸಹಕಾರದಿಂದ ಬಹಳ ಅದ್ಧೂರಿಯಾಗಿ ನಡೆಯಿತು.ಎರ್ಮಾಳು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಜಿಲ್ಲಾ ಪಂಚಾಯಿತಿ ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಛೇರಿ ಇವರ ಜಂಟಿ ಆಶ್ರಯದಲ್ಲಿ ನಡೆದ ಈ ಪಂದ್ಯಾಕೂಟವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತೆಂಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಾ ಕುಮಾರಿ ವಹಿಸಿದ್ದರು.

ಪಡುಬಿದ್ರಿ ವಲಯದಿಂದ ಒಟ್ಟು ೨೧ ತಂಡಗಳು ಪಾಲ್ಗೋಂಡಿದ್ದು, ಬಾಲಕರ ೧೪ ತಂಡ ಹಾಗೂ ಬಾಲಕಿಯರ ಏಳು ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಬಾಲಕರ ವಿಭಾಗದಲ್ಲಿ ಮೂಳೂರು ಅಲಿಸಾನ್ ಶಾಲಾ ತಂಡ ಪ್ರಥಮ ಬಹುಮಾನ ಪಡೆದರೆ, ಪಡುಬಿದ್ರಿ ಸಾಗರ್ ವಿದ್ಯಾಮಂದಿರ ಶಾಲಾ ತಂಡ ದ್ವಿತೀಯ ಬಹುಮಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಸಾಗರ್ ವಿದ್ಯಾಮಂದಿರ್ ಪ್ರಥಮ ಬಹುಮಾನ ಪಡೆದರೆ, ಪಡುಬಿದ್ರಿ ಲಯನ್ಸ್ ಶಾಲಾ ತಂಡ ದ್ವಿತೀಯ ಬಹುಮಾನ ತನ್ನದಾಗಿಸಿಕೊಂಡಿದೆ. ಭಾಗವಹಿಸಿದ ತಂಡಗಳಿಗೆ ಊಟ ಉಪಹಾರವನ್ನು ಸಂಘಟಕರು ಆಯೋಜಿಸಿದ್ದರು. ಈ ಬಗ್ಗೆ ದೈಹಿಕ ಶಿಕ್ಷಣ ಶಿಕ್ಷಕ ಆಲ್ವಿನ್ ವಿ೪ಗೆ ಮಾಹಿತಿ ನೀಡಿದ್ದಾರೆ.

Related posts

Leave a Reply