Header Ads
Header Ads
Breaking News

ಬಾಲಗೋಕುಲ ಸಮಿತಿಯಿಂದ ಶ್ರೀ ಕ್ರಷ್ಣ ಜನ್ಮಾಷ್ಠಮಿ . ಕೃಷ್ಣ ವೇಷಧಾರಿ ಮಕ್ಕಳ ಶೋಭಾಯಾತ್ರೆ. ಸೆ.2ರಂದು ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ.

ವಿಟ್ಲ: ಮೂರುಕಜೆ ಮೈತ್ರೇಯೀ ಗುರುಕುಲದ ಸಹಕಾರದೊಂದಿಗೆ ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ, ಕೃಷ್ಣ ವೇಷಧಾರಿ ಮಕ್ಕಳ ಶೋಭಾಯಾತ್ರೆ ಹಾಗೂ ದಶಮಾನೋತ್ಸವದ ಸಮಾರೋಪ ಸಮಾರಂಭ ಸೆ.೨ರ ಭಾನುವಾರ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಬಾಲಗೋಕುಲ ಸಮಿತಿ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕಟ್ಟೆ ವಿಟ್ಲ ಹೇಳಿದರು.ಅವರು ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ2007ರಲ್ಲಿ ಬಾಲಗೋಕುಲ ವಿಟ್ಲ ಸಮಿತಿ ಅಸ್ತಿತ್ವಕ್ಕೆ ಬಂದು ಹತ್ತು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರತಿತಿಂಗಳು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಕ್ಕಳಿಗೆ ಎಳವೆಯಿಂದಲೇ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ತಿಳಿಸಿಕೊಡುವ ಕೇಂದ್ರವೇ ಬಾಲಗೋಕುಲವಾಗಿದೆ. ಬಾಲಗೋಕುಲಗಳ ಮೂಲಕ ಮಕ್ಕಳಲ್ಲಿ ಸದ್ಗುಣಗಳ ಅರಿವು ಮೂಡಿಸಿ ಸ್ವಾಭಿಮಾನಿ ಚಿಂತನಾಶೀಲ ಮಕ್ಕಳ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.ಬಂಟ್ವಾಳ ನ್ಯಾಯವಾದಿ ಶಿವಾನಂದ ಅವರು ಶೋಭಾಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಮೈಸೂರು-ಮಂಗಳೂರು ಎಸ್‌ಎಲ್‌ವಿ ಬುಕ್ ಹೌಸ್‌ನ ದಿವಕರದಾಸ್, ಪುತ್ತೂರು ಶರಣಂ ಕನ್‌ಸ್ಟ್ರಕ್ಷನ್ಸ್‌ನ ರವಿ ಬಿ.ಕೆ ಮೊದಲಾದವರು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೃಷ್ಣ ಲೀಲೆ-ಕಂಸ ವಧೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಾಲಗೋಕುಲ ಸಮಿತಿ ಅಧ್ಯಕ್ಷ ಜಗದೀಶ ಪಾಣೆಮಜಲು, ಗೌರವಾಧ್ಯಕ್ಷ ಆನಂದ ಕಲ್ಲಕಟ್ಟ, ಉಪಾಧ್ಯಕ್ಷ ಶ್ರೀಧರ್, ಆರ್.ಕೆ ಆರ್ಟ್ಸ್‌ನ ರಾಜೇಶ್ ವಿಟ್ಲ, ನಾಗೇಶ್ ಬಸವನಗುಡಿ ಉಪಸ್ಥಿತರಿದ್ದರು.

Related posts

Leave a Reply