Breaking News

ಬಾಳೆಗಿಡದ ಪವರ್ ರಸ್ತೆ ಹೊಂಡ ಮುಚ್ಚಿಸಿತು, ಕೋಡಿಂಬಾಡಿ ಅರ್ಬಿ ರಸ್ತೆಯಲ್ಲಿ ಪವಾಡ

ರಸ್ತೆ ಹೊಂಡ ಬಿದ್ದರೆ ಬಾಳೆಗಿಡ ನೆಡಿ. ತಕ್ಷಣ ರಸ್ತೆ ಹೊಂಡದ ದುರಸ್ಥಿ ಕಾರ್ಯ ನಡೆಯುತ್ತದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆಯಲ್ಲಿ ಬಾಳೆಗಿಡ ಕಂಡ ಕೂಡಲೇ ತಕ್ಷಣ ಎಚ್ಚೆತ್ತುಕೊಳ್ಳುತ್ತಾರೆ. ಅಷ್ಟು ಪವರ್ ಬಾಳೆಗಿಡಕ್ಕಿದೆ.
ಉಪ್ಪಿನಂಗಡಿ ಪುತ್ತೂರು ನಡುವಣ ಕೋಡಿಂಬಾಡಿಯ ಅರ್ಬಿ ಎಂಬಲ್ಲಿ ರಸ್ತೆ ಸಂಪೂರ್ಣವಾಗಿ ಹಾಳಾಗಿತ್ತು. ಈ ರಸ್ತೆಯ ಬಗ್ಗೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿತ್ತು. ಆದರೆ ಯಾವುದೇ ಪರಿಣಾಮ ಬೀರಲಿಲ್ಲ. ಆದರೆ ಯಾವಾಗ ಇಲ್ಲಿರುವ ಹೊಂಡದಲ್ಲಿ ಬಾಳೆಗಿಡ ಪ್ರತ್ಯಕ್ಷವಾಯಿತೋ ಅದನ್ನು ಪತ್ರಕರ್ತರು ಪೋಟೋ ತೆಗೆದ ಸುದ್ದಿ ಗೊತ್ತಾಯಿತೋ ಆಗ ಹೊಂಡ ಮುಚ್ಚುವ ಕೆಲಸ ನಡೆಯಿತು.
ಕಳೆದ ಒಂದು ತಿಂಗಳಿನಿಂದ ಈ ಉಪ್ಪಿನಂಗಡಿ ಪುತ್ತೂರು ರಸ್ತೆಯಲ್ಲಿ ದಾರಂದಕುಕ್ಕುನಿಂದ ಹಿಡಿದು ಕೋಡಿಂಬಾಡಿವರೆಗಿನ ರಸ್ತೆ ನಾದುರಸ್ಥಿ ಸ್ಥಿತಿಯಲ್ಲಿದೆ. ಇದರಲ್ಲಿ ಕೋಡಿಂಬಾಡಿ ಅರ್ಬಿ ಎಂಬಲ್ಲಿ ದೊಡ್ಡ ದೊಡ್ಡ ಹೊಂಡಗಳು ಉಂಟಾಗಿದ್ದವು. ಸಂಜೆ ಈ ಹೊಂಡಕ್ಕೆ ಯಾರೋ ಒಬ್ಬರು ಬಾಳೆಗಿಡ ತಂದು ನೆಟ್ಟರು. ಇದನ್ನು ಗಮನಿಸಿದ ಜನತೆ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಸಂಜೆಯೇ ಬಾಳೆಗಿಡವನ್ನು ಹೊಂಡದಿಂದ ತೆಗೆದು ಹೊಂಡಕ್ಕೆ ಮಣ್ಣು ತುಂಬಿಸುವ ಕೆಲಸ ನಡೆಯಿತು. ಹೇಗಿದೆ ಬಾಳೆಗಿಡದ ಪವರ್?

Related posts

Leave a Reply