Header Ads
Header Ads
Header Ads
Breaking News

ಬಾಳೆಪುಣಿ ಗ್ರಾ.ಪಂ.ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಸಚಿವ ಯು.ಟಿ. ಖಾದರ್ ಶಿಲಾನ್ಯಾಸ

ಉಳ್ಳಾಲ: ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವ ಮೂಲಕ ಎಲ್ಲಿಯೂ ತಾರತಮ್ಯವಾಗದ ರೀತಿಯಲ್ಲಿ , ಯಾರ ಮನಸ್ಸಿಗೆ ನೋವಾಗದಂತೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೂಹಾಕುವಕಲ್ಲಿನಿಂದ ಕಣಂತೂರು ಶ್ರೀ ತೋಡಕುಕ್ಕಿನಾರ್ ದೈವಸ್ಥಾನದವರೆಗೆ ಸಂಪರ್ಕಿಸುವ ರಸ್ತೆಗೆ ರೂ. 30 ಲಕ್ಷ ಅನುದಾನದಲ್ಲಿ ನಡೆಯಲಿರುವ ಡಾಮರೀಕರಣ ಮತ್ತು ಅಗಲೀಕರಣ ಕಾಮಗಾರಿಗೆ ಭಾನುವಾರ ಕಣಂತೂರಿನಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ ಎಸ್ ಗಟ್ಟಿ ಮಾತನಾಡಿ ನುಡಿದಂತೆ ನಡೆದಿರುವ ಸಚಿವರ ನಡೆಯಿಂದ ರಾಜ್ಯದಲ್ಲೇ ನಂ.1 ಅನಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿರುವ ಅವರು ಕಣಂತೂರು ರಸ್ತೆಗೂ ವಿಶೇಷ ಅನುದಾನದ ಮೂಲಕ ಅಭಿವೃದ್ಧಿ ಕಾಮಗಾರಿಗೆ ಮುಂದಾಗಿದ್ದಾರೆ. ಮುಂದಿನ ಎ.10 ರ ಒಳಗೆ ಹೂಹಾಕುವಕಲ್ಲು- ಕಣಂತೂರು ದೈವಸ್ಥಾನದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳುವುದು ಎಂದರು.

ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಕಣಂತೂರು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಮಂಜು ಭಂಡಾರಿ, ದೇವಿಪ್ರಸಾದ್ ಪೊಯ್ಯತ್ತಾಯ, ಕಣಂತೂರು ತೋಡಕುಕ್ಕಿನಾರ್ ದೈವಸ್ಥಾನದ ಅರ್ಚಕರಾದ ರಾಜಗೋಪಾಲ್ ಭಟ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply