Header Ads
Breaking News

ಬಾವಿಗೆ ಬಿದ್ದ ಶ್ವಾನವನ್ನು ರಕ್ಷಿಸಿದ ಮಹಿಳೆ; ಈಜು ಬರದಿದ್ದರೂ ಬಾವಿಗಿಳಿದು ಶ್ವಾನ ರಕ್ಷಿಸಿದ ದಿಟ್ಟ ಮಹಿಳೆ

ಮಂಗಳೂರಿನ ಬಲ್ಲಾಳ್‍ಬಾಗ್ ಮೈದಾನವೊಂದರ ಬಳಿಯಿರುವ 30 ಅಡಿ ಬಾವಿಗೆ ಆಕಸ್ಮಿಕವಾಗಿ ನಾಯಿಯೊಂದು ಬಿದ್ದಿತು. ಇದನ್ನು ರಕ್ಷಣೆ ಮಾಡಲು ಹಲವಾರು ಮಂದಿ ಮೀನ ಮೇಷ ಎಣಿಸುತ್ತಿದ್ದಾಗ ಮಹಿಳೆಯೊಬ್ಬರು ಈಜು ಬರದೇ ಇದ್ದರೂ ಬಾವಿಗಿಳಿದು ಶ್ವಾನವನ್ನು ಕಾಪಾಡಿದರು.ಇದು ಸಾಮಾಜಿಕ ಜಾಲ ತಾಣದಲ್ಲಿವೈರಲ್ ಆಗಿದೆ. ರಜನಿ ದಾಮೋದರ್ ಶೆಟ್ಟಿ ಬಲ್ಲಾಳ್‍ಬಾಗ್ ಅವರೇ ಈ ಸಾಹಸ ಮೆರೆದ ಧೀರೆ.

ಬಲ್ಲಾಳ್‍ಬಾಗ್ ಮೈದಾನವೊಂದರ ಬಳಿ ಬುಧವಾರ ರಾತ್ರಿ ಶ್ವಾನಗಳು ಪರಸ್ಪರ ಕಚ್ಚಾಡುತ್ತಿದ್ದಾಗ, ಒಂದು ನಾಯಿ 30 ಅಡಿ ಆಳದ ಬಾವಿಗೆ ಬಿದ್ದಿತ್ತು. ನಾಯಿ ಬಿದ್ದಿರುವುದನ್ನು ನೂರಾರು ಮಂದಿ ವೀಕ್ಷಿಸಿದರು. ನಾಯಿಯನ್ನು ಮೇಲೆತ್ತಲು 3 ಗಂಟೆ ಯತ್ನಿಸಿದರೂ ಅದು ಸಫಲವಾಗಲಿಲ್ಲ. ಕೊನೆಗೆ ಪ್ರಾಣಿ ಪ್ರೇಮಿ ರಜನಿ ಸ್ಥಳಕ್ಕೆ ಬಂದರು. ಹಲವರಿಗೆ ಕೋರಿಕೆ ಸಲ್ಲಿಸಿದರೂ ಬಾವಿ ಆಳ ನೋಡಿ ಎಲ್ಲರೂ ಹಿಂಜರಿದರು. ಕೊನೆಗೆ ರಜನಿ ಅವರೇ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದರು. ನಾಯಿ ಕಚ್ಚಲು ಯತ್ನಿಸಿದರೂ ಸಾಹಸ ಮಾಡಿ ಅದರ ಸೊಂಟಕ್ಕೆ ಹಗ್ಗ ಬಿಗಿದು ಮೇಲಿದ್ದವರು ಎಳೆದುಕೊಳ್ಳಲು ಒತ್ತಾಸೆ ನೀಡಿದರು. ರಜನಿ ದಾಮೋದರ್ ಶೆಟ್ಟಿ ಮೂಲತಃ ಮುಂಬಯಿನವರಾಗಿದ್ದು, ಬಾಲ್ಯದಿಂದಲೂ ಪ್ರಾಣಿಪ್ರಿಯೆ ಕೂಡ ಆಗಿದ್ದಾರೆ.

Related posts

Leave a Reply

Your email address will not be published. Required fields are marked *