Header Ads
Header Ads
Header Ads
Breaking News

ಬಾವಿಯೊಳಗೆ ಬಿದ್ದ ಆಡು ಮರಿ ವಿಟ್ಲದ ಸಾಮಾಜಿಕ ಸಂಘಟನೆಯಿಂದ ರಕ್ಷಣೆ

ಬಾವಿಯೊಂದಕ್ಕೆ ಬಿದ್ದ ಆಡು ಮರಿಯನ್ನು ವಿಟ್ಲದ ಸಾಮಾಜಿಕ ಸಂಘಟನೆಯೊಂದು ರಕ್ಷಿಸಿ ಅದರ ತಾಯಿ ಮಡಿಲು ಸೇರಿಸುವ ಮೂಲಕ ಮಾನವೀಯತೆ ಮೆರೆದಿದೆ.

ವಿಟ್ಲದ ಮೇಗಿನಪೇಟೆ ಎಂಬಲ್ಲಿರುವ ಹಮೀದ್ ಎಂಬವರಿಗೆ ಸೇರಿದ ಜಾರಿ ಸುಮಾರು ಅಂದಾಜು ೪೦ ಅಡಿ ಆಳದ ಬಾವಿಗೆ ಆಡು ಮರಿಯೊಂದು ಆಹಾರ ಹುಡುಕುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದೆ. ಇದರಿಂದ ಅದರ ತಾಯಿ ಆಡು ಬಾವಿ ಮೇಲೆ ನಿಂತು ತನ್ನ ಕಂದಮ್ಮನ ರಕ್ಷಣೆಗಾಗಿ ಬೊಬ್ಬೆ ಹೊಡೆಯುತ್ತಿದ್ದರೆ ಇನ್ನೂ ಬಾವಿಯೊಳಗೆ ಬಿದ್ದಿರುವ ಅದರ ಮರಿ ಸುಮಾರು ಒಂದು ಗಂಟೆಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿ ಬೊಬ್ಬೆ ಹೊಡೆಯುತ್ತಿತ್ತು.

ಈ ಬಗ್ಗೆ ಮಾಹಿತಿ ಪಡೆದ ವಿಟ್ಲದ ಸಾಮಾಜಿಕ ಸಂಘಟನೆಯಾದ “ಫ್ರೆಂಡ್ಸ್ ವಿಟ್ಲ” ತಂಡದ ಮುರಳೀಧರ್ ವಿಟ್ಲ, ಹೈದರ್ ಅಲಿ ಮೇಗಿನಪೇಟೆ ಹಾಗೂ ಜೈನು ಎಂಬವರು ಜತೆಯಾಗಿ ಕಾರ್ಯಾಚರಣೆ ನಡೆಸಿ ಬಾವಿಯಿಂದ ಮರಿಯನ್ನು ಮೇಲೆತ್ತಿದ್ದಾರೆ. ಹಸಿವುನಿಂದ ಒದ್ದಾಡುತ್ತಿದ್ದ ಮರಿ ಬಾವಿ ಏರಿ ಮೇಲೆ ಆಗಮಿಸುತ್ತಿದ್ದಂತೆ ಅದರ ತಾಯಿಯ ಮಡಿಲು ಸೇರಿ ಎದೆ ಹಾಲು ಕುಡಿಯುತ್ತಿರುವ ದೃಶ್ಯವೂ ಕಂಡು ಬಂದಿದೆ.

ಫ್ರೆಂಡ್ಸ್ ವಿಟ್ಲ ತಂಡ ಇದೇ ರೀತಿ ವರ್ಷದ ಹಿಂದೆ ದನಯೊಂದು ಬಾವಿಗೆ ಬಿದ್ದಾಗ ರಕ್ಷಣೆ ಮಾಡಿದ್ದರು. ವಿಟ್ಲದಲ್ಲಿ ನೀರಿಗೆ ಬಿದ್ದು ಸಾವು ಪ್ರಕರಣಗಳು ನಡೆದಾಗ ಪೊಲೀಸರು ಕೂಡಾ ಇವರಿಗೆ ಮಾಹಿತಿ ನೀಡುತ್ತಾರೆ. ಆಗ್ನಿಶಾಮಕದಳದವರು ಮಾಡುವ ಕೆಲಸವನ್ನು ಕ್ಷಣಾರ್ಧದಲ್ಲಿ ಇದೇ ತಂಡ ಮಾಡಿ ಮುಗಿಸುತ್ತದೆ. ಅದಲ್ಲದೇ ಇದೇ ತಂಡದಲ್ಲಿ ಆಂಬ್ಯುಲೆನ್ಸ್ ವಾಹನವಿದ್ದು, ಬಡವರಿಗೆ ಉಚಿತ ಸೇವೆ ನೀಡುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಇದೀಗ ಈ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Related posts

Leave a Reply