Breaking News

ಬಾವಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಆಯತಪ್ಪಿ ಬಿದ್ದು ಸಾವು, ಭಟ್ಕಳದ ಗಂಜೀಕೇರಿಯಲ್ಲಿ ದುರ್ಘಟನೆ

ಭಟ್ಕಳ ತಾಲುಕಿನ ಬೆಳ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಜೀಕೇರಿ ಶೆಟ್ಟಿಕೇರಿ ಬಳಿ ಬಾವಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಆಯತ್ಪಪಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಭಟ್ಕಳದ ಬೆಳಕೆಯ ಗಂಜೀಕೇರಿಯ ಶೆಟ್ಟಿಕೇರಿಯ ನಿವಾಸಿ ಕೃಷ್ಣ ನಾಯ್ಕ ಎಂಬವರ ಬಾವಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಭಟ್ಕಳದ ಶಿರೂರಿನ ಹಣಬರಕೇರಿಯ ನಿವಾಸಿ ೫೫ ವರುಷದ ಬಚ್ಚ ಮಂಜಾ ಅಣಬಾರ ಎಂದು ತಿಳಿದು ಬಂದಿದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply