Header Ads
Breaking News

ಬಿಐಟಿ ಆಂಡ್ ಬೀಟ್ಸ್‌ನಿಂದ ಗ್ರೀನ್ ವಾಕಥಾನ್ 2019 :ನೆಹರೂ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಆಯೋಜನೆ

ವಿಶ್ವ ಹಸಿರು ನಿರ್ಮಾಣ ಸಪ್ತಾಹದ ಅಂಗವಾಗಿ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬ್ಯಾರೀಸ್ ಎನ್‌ವೈರೋ- ಅರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬೀಡ್ಸ್) ಸಂಸ್ಥೆ ಸೆ. 29ರಂದು ನಗರದ ನೆಹರೂ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಗ್ರೀನ್ ವಾಕಥಾನ್ ಆಯೋಜಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಬಿಐಟಿ ಪ್ರಾಂಶುಪಾಲ ಡಾ. ಪಿ. ಮಹಾಬಲೇಶ್ವರಪ್ಪ ಮಾಹಿತಿ ನೀಡಿ, ವಾಕಥಾನ್‌ಗೆ ಬೆಳಗ್ಗೆ ೭.೧೫ಕ್ಕೆ ನೆಹರೂ ಮೈದಾನದಲ್ಲಿ ಶಾಸಕ ವೇದವ್ಯಾಸ ಕಾಮತ್ ಹಸಿರುನಿಶಾನೆ ತೋರಲಿದ್ದಾರೆ. ಸಮಾರೋಪ ಸಮಾರಂಭವು ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದ್ದು, ಐಜಿಬಿಸಿಯ ಮಂಗಳೂರು ವಿಭಾಗದ ಮುಖ್ಯಸ್ಥ ಡಿ.ಬಿ. ಮೆಹ್ತಾ ಭಾಗವಹಿಸಲಿದ್ದಾರೆ. ಜನರಲ್ಲಿ ಸಮರ್ಥನೀಯ ಅಭಿವೃದ್ಧಿ, ಇಂಧನ ಉಳಿತಾಯ, ಮರುಬಳಕೆ, ಪುನರ್ ಪರಿಷ್ಕರಣೆ ಬಗ್ಗೆ ಜಾಗೃತಿ ಹಾಗೂ ಶುದ್ಧ ಮತ್ತು ಹಸಿರು ನಗರಕ್ಕೆ ಪ್ರೋತ್ಸಾಹ ನೀಡುವುದು ಇದರ ಪ್ರಮುಖ ಉದ್ದೇಶ ಎಂದವರು ಹೇಳಿದರು.
ಪ್ರಗತಿಪರ ಹಾಗೂ ಶಾಂತಿಯುತ ಹಸಿರು ವಿಶ್ವದ ನಿರ್ಮಾಣದ ಜತೆಗೆ ತಂತ್ರಜ್ಞಾನದ ಪ್ರತಿ ಕ್ಷೇತ್ರದಲ್ಲೂ ನಾಯಕತ್ವದ ಸೃಷ್ಟಿಗೆ ಕೊಡುಗೆ ನೀಡುವುದು ಬ್ಯಾರೀಸ್ ಗ್ರೂಪ್‌ನ ಉದ್ದೇಶವಾಗಿದೆ. ಹವಾಮಾನ ಬದಲಾವಣೆಯ ನಿರಂತರ ಬೆದರಿಕೆಯನ್ನು ಜಗತ್ತು ಎದುರಿಸುತ್ತಿದೆ. ಇದರಿಂದ ಭೂಮಿಯನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದು. ಇಂಧನ ಉಳಿಸುವುದು ಹಾಗೂ ಇಂಧನ ಸಂರಕ್ಷಣೆಯಲ್ಲಿ ತಂತ್ರಜ್ಞಾನಗಳು ಹಾಗೂ ಮೂಲಭೂತ ಸೌಕರ್ಯಗಳ ಬಳಕೆ, ನವೀಕರಿಸಬಹುದಾದ ಇಂಧನ ಮೂಲಕ ಪತ್ತೆಗೆ ಪ್ರಯತ್ನದಿಂದ ಭವಿಷ್ಯವನ್ನು ಸಮರ್ಥ ಗೊಳಿಸಬಹುದಾಗಿದೆ ಎಂದು ಅವರು ಹೇಳಿದ್ರು.
ಸುದ್ದಿಗೋಷ್ಠಿಯಲ್ಲಿ ಬೀಡ್ಸ್ ಪ್ರಾಂಶುಪಾಲ ಆರ್. ಅಶೋಕ್ ಎಲ್.ಪಿ. ಮೆಂಡೋನ್ಸ ಹಾಗೂ ಡಾ. ಮುಸ್ತಫಾ ಬಸ್ತಿಕೋಡಿ ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *