Header Ads
Breaking News

ಬಿಜೆಪಿಗೆ ದೇಶ ಮೊದಲು ಆದ್ರೆ ಕಾಂಗ್ರೆಸ್‌ಗೆ ಓಟ್‌ಬ್ಯಾಂಕೇ ಫಸ್ಟ್: ಕಾಂಗ್ರೆಸ್ ವಿರುದ್ಧ ಮಾಳವಿಕಾ ಕಿಡಿ!

ಬಿಜೆಪಿಗೆ ರಾಷ್ಟ್ರ ಮೊದಲು, ಅದ್ರೆ ಕಾಂಗ್ರೆಸ್‍ಗೆ ಓಟ್‍ಬ್ಯಾಂಕ್ ಫಸ್ಟ್ ಅಂತಾ ಬಿಜೆಪಿ ರಾಜ್ಯ ವಕ್ತಾರೆ ಹಾಗೂ ಚಿತ್ರನಟಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ. ಈ ಕುರಿತು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಚುನಾವಣಾ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಚಾರ, ದೇಶದ ಭಯೋತ್ಪದಾನೆ ನಿಯಂತ್ರಿಸಲು ಮೋದಿ ಸರ್ಕಾರ ಸತತ ಪ್ರಯತ್ನ ನಡೆಸಿದೆ. ಮುಂದಿನ ದಿನಗಳಲ್ಲೂ ಪ್ರಯತ್ನ ಮಾಡುತ್ತೇವೆ ಎಂದು ಮೋದಿಯವರು ಘೋಷಣೆ ಮಾಡಿದ್ದಾರೆ ಅಂತಾ ಹೇಳಿದರು. ಕಾಂಗ್ರೆಸ್ 1971ರಲ್ಲಿ ಗರೀಬಿ ಹಠಾವೋ ಘೋಷಣೆ ಮಾಡಿದ್ದರು, ಈಗ ಬಡತನ ನಿರ್ಮಾಲನೆಗೆಂದು ನ್ಯಾಯದ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಈವರೆಗೆ ಕಾಂಗ್ರೆಸ್ ಬಡವರಿಗೆ ಮಾಡಿದ್ದು ಅನ್ಯಾಯವೇ ಎಂದು ಪ್ರಶ್ನಿಸಿದರು. ಪರೋಕ್ಷವಾಗಿ 70 ವರ್ಷಗಳಲ್ಲಿ ಅನ್ಯಾಯ ಮಾಡಿದ್ದೇವೆಂದು ಒಪ್ಪಿಕೊಂಡಿದ್ದಾರೆ, ಪ್ರಣಾಳಿಕೆಯಲ್ಲಿ 124 ಎ ಕಲಂ ರದ್ದುಪಡಿಸುವ ಭರವಸೆ ನೀಡಿದ್ದಾರೆ. ಇದರಿಂದ ಪ್ರತ್ಯೇಕತಾವಾದಿಗಳಿಗೆ ಕಾಂಗ್ರೆಸ್ ಬೆಂಬಲಿಸುವ ಸೂಚನೆ ನೀಡಿದೆ ಎಂದು ತರಾಟೆಗೆ ತೆಗೆದುಕೊಂಡರು.

Related posts

Leave a Reply

Your email address will not be published. Required fields are marked *