Breaking News

ಬಿಜೆಪಿಯವವರು ಸಾವಿನಲ್ಲೂ ರಾಜಕೀಯ ಮಾಡುತ್ತಾರೆ,  ಅನುರಾಗ್ ತಿವಾರಿ ನಿಧನಕ್ಕೆ ಸಚಿವ ಯು. ಟಿ. ಖಾದರ್ ಪ್ರತಿಕ್ರಿಯೆ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಾಗಿದ್ದ ಐ‌ಎ‌ಎಸ್ ಅಧಿಕಾರಿ ಅನುರಾಗ್ ತಿವಾರಿಯವರ ಮೃತದೇಹ ಉತ್ತರ ಪ್ರದೇಶದ ವಿಧಾನ ಸೌಧದ ಎದುರು ಶವವಾಗಿ ಪತ್ತೆಯಾಗಿದೆ. ಇದೇ ಅಧಿಕಾರಿ ಹಿಂದೆಯೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಗರಣ ಬಯಲುಗೊಳಿಸಲಿದ್ದರು ಎಂಬ ಆರೋಪವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂತ್ರಿ ಯು. ಟಿ. ಖಾದರ್, ಬಿಜೆಪಿಯವವರು ಸಾವಿನಲ್ಲೂ ರಾಜಕೀಯ ಮಾಡುತ್ತ ಬಂದಿದ್ದಾರೆ. ಇದೇನು ಹೊಸತಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಯು. ಟಿ. ಖಾದರ್, ಅನುರಾಗ್ ತಿವಾರಿಯವರು ಇಲಾಖೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡು ೧೨೭ ದಿನಗಳಷ್ಞೇ ಆಗಿದ್ದು, ಇದರಲ್ಲಿ ಅವರು ೩೭ ದಿನಗಳ ಕಾಲ ಮಾತ್ರವೇ ಕರ್ತವ್ಯ ನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ ಅವರು ನನಗಾಗಲಿ, ಇಲಾಖೆಯ ಕಾರ್ಯದರ್ಶಿಗಾಗಲಿ ಹಗರಣಗಳ ಯಾವುದೇ ವಿಷಯ ತಿಳಿಸಿಲ್ಲ. ಸಾವಿನ ವಿಷಯದಲ್ಲಿ ರಾಜಕೀಯ ಮಾಡುವುದು ಬಿಜೆಪಿಯವರ ಪ್ರವೃತ್ತಿ ಯಾಗಿದೆ. ಹಿಂದೆ ಕೂಡ ಇವರು ಅಧಿಕಾರಿಗಳ ಸಾವಿನ ವಿಷಯದಲ್ಲಿ ರಾಜಕೀಯ ಮಾಡಿದ್ದರು. ಈಗ ದಾಖಲೆಯೇ ಇಲ್ಲದೆ ಹಗರಣದ ಆರೋಪ ಮಾಡುತ್ತಿದ್ದಾರೆ ಎಂದು ಕುಟುಕಿದರು.

Related posts

Leave a Reply