Header Ads
Header Ads
Breaking News

ಬಿಜೆಪಿಯಿಂದ ರೈತ ಸಮುದಾಯಕ್ಕೆ ಅವಮಾನ ಜಿಲ್ಲೆಯ ರೈತರಿಗೆ ಕರಾಳ ದಿನ ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಆರೋಪ

 ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರಾವಳಿಗೆ ಬಂದಿದ್ದರೂ ಅಡಿಕೆ ಸೇರಿದಂತೆ ಕೃಷಿ ಬೆಳೆಗಳ ಬೆಲೆ ಕುಸಿತದ ಬಗ್ಗೆಯಾಗಲೀ ಅಡಿಕೆ ನಿಷೇಧ ಆತಂಕದ ಕುರಿತಾಗಲೀ ಏನೂ ಮಾತನಾಡದೆ ರೈತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಮಾತ್ರವಲ್ಲದೆ ಅವರ ಭೇಟಿಯ ದಿನ ಈ ಭಾಗದ ರೈತರಿಗೆ ಕರಾಳ ದಿನವಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಹೇಳಿದ್ದಾರೆ.
ಸುಳ್ಯದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿಕರ ಸಮಸ್ಯೆ ಕುರಿತಂತೆ ಅಮಿತ್ ಶಾ ಅವರಿಗೆ ನಮ್ಮ ಸಂಸದ ಹಾಗೂ ಶಾಸಕರು ವಿಷಯ ತಿಳಿಸಿ ಅವರು ರೈತರಿಗೆ ಚೈತನ್ಯದ ಮಾತುಗಳನ್ನು ಹೇಳಬಹುದು ಎಂದು ನಾವು ನಿರೀಕ್ಷಿಸಿದ್ದೆವು. ಒಂದು ವೇಳೆ ಈ ಮಾತುಗಳನ್ನಾಡಿದರೆ ಬಿಜೆಪಿಗೂ ಚೈತನ್ಯ ಕೊಟ್ಟ ಹಾಗೆ ಆಗುತ್ತಿತ್ತು. ಆದರೆ ಅಮಿತ್ ಶಾ ಈ ಕುರಿತಂತೆ ಏನೂ ಮಾತನಾಡದೆ ರೈತ ವಿರೋಧಿ ನಡೆ ಅನುಸರಿಸಿದ್ದಾರೆ ಎಂದರಲ್ಲದೆ ಅಡಿಕೆ ನಿಷೇಧ ಆತಂಕದ ಕುರಿತಾಗಿ ಅಮಿತ್ ಶಾ ಏನೂ ಹೇಳದೆ ನಳಿನ್‌ಕುಮಾರ್ ಕಟೀಲ್ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಪುತ್ತೂರಿನಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲೂ ವಿಶೇಷತೆ ಏನೂ ಇರಲಿಲ್ಲ. ಯುವ ಜನತೆಯ ಉದ್ಯೋಗ ಕುರಿತಂತೆ ಏನೂ ಮಾತನಾಡಿಲ್ಲ ಎಂದು ಅವರು ಹೇಳಿದರು.

Related posts

Leave a Reply