Header Ads
Header Ads
Breaking News

ಬಿಜೆಪಿಯ ಜನಸುರಕ್ಷಾ ಯಾತ್ರೆ ಬೆಂಕಿ ಹಚ್ಚುವ ಕಾರ್ಯಕ್ರಮ ಮಂಗಳೂರಿನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಆರೋಪ

ಬಿಜೆಪಿಯ ಜನಸುರಕ್ಷಾ ಯಾತ್ರೆ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಮಂಗಳೂರು ಆಗಮನ ಕಾರ್ಯಕ್ರಮ ಬೆಂಕಿ ಹಚ್ಚುವ ಕಾರ್ಯಕ್ರಮ. ಕರ್ನಾಟಕದ ಬಿಜೆಪಿ ಭೋಗಿಗಳಾಗಿದ್ದರಿಂದ ಯೋಗಿ ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಆಪಾದಿಸಿದ್ದಾರೆ.ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಮಾಧ್ಯಮದವ್ರ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ನೇರವಾಗಿ ಕಿಡಿಕಾರಿದ್ರು. ಜೆಡಿಎಸ್ ಸೌಹಾರ್ದ ಯಾತ್ರೆ ಮಾಡಲು ಅನುಮತಿ ಕೊಡುವುದಿಲ್ಲ ಎಂದು ಕಿಡಿಕಾರಿದ ಅವ್ರು ಅಮಾಯಕರಿಗೆ ರಕ್ಷಣೆ ಕೊಡಬೇಕಾದ ಅಧಿಕಾರಿಗಳು ರಾಜಕೀಯ ಪಕ್ಷಗಳ ಏಜೆಂಟ್ ಆಗಿದ್ದಾರೆ. ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಅಭಿವೃದ್ಧಿ ವಿಷಯಗಳಿಗೆ ಮಹತ್ವವನ್ನು ನೀಡುತ್ತಿಲ್ಲ. ಇವೆರಡು ಪಕ್ಷಗಳು ವಾಮಮಾರ್ಗದಲ್ಲಿ ಹೋಗುತ್ತಿದೆ ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರ ಬಂದ ನಂತರ ಹಿಂದೂಗಳ ರಕ್ಷಣೆಯಿಲ್ಲ ಎಂದು ಆಪಾದಿಸುತ್ತಿದೆ. ಈ ಎರಡು ಪಕ್ಷಗಳಿಂದ ಕರಾವಳಿ ಜನರು ಆತಂಕದಲ್ಲಿದ್ದಾರೆ. ಬೆಳಿಗ್ಗೆ ಮನೆಯಿಂದ ಹೊರಟವರು ಮನೆಗೆ ವಾಪಾಸ್ ಬರುವ ಬಗ್ಗೆ ಅನುಮಾನದ ವಾತಾವರಣ ಇಲ್ಲಿದೆ ಎಂದರು. ಇನ್ನು ಮಂಗಳೂರಿಗೆ ಯೋಗಿ ಆದಿತ್ಯನಾಥ್ ಬರುತ್ತಿದ್ದಾರೆ. ಇವರಲ್ಲದೇ ಬಿಜೆಪಿಗೆ ಬೇರೆ ನಾಯಕರೇ ಇಲ್ವಾ..? ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕೊರತೆ ಇದ್ಯಾ..? ಅಥವಾ ಕರ್ನಾಟಕದಲ್ಲಿರೋ ಬಿಜೆಪಿ ನಾಯಕರ ಮೇಲೆ ಹಿರಿಯರಿಗೆ ವಿಶ್ವಾಸವಿಲ್ಲವೇ ಎಂದು ವ್ಯಂಗ್ಯವಾಡಿದ್ರು.

ಚೆಕ್ ಮೂಲಕ ಲಂಚ ಸೇರಿದಂತೆ ಕರ್ನಾಟಕದಲ್ಲಿ ಬಿಜೆಪಿಯವರು ಭೋಗ ಮಾಡಿದ್ದಾರೆ. ಉತ್ತರಪ್ರದೇಶದ ಮಕ್ಕಳ ಸಾವನ್ನು ತಪ್ಪಿಸಲಾಗದವರು ಜನಸುರಕ್ಷಾ ಯಾತ್ರೆ ಮಾಡುತ್ತಿದ್ದಾರೆ. ಆಸ್ಪತ್ರೆಗೆ ಬಂದ ಮಕ್ಕಳನ್ನು ರಕ್ಷಿಸಲಾಗದ ಮುಖ್ಯಮಂತ್ರಿ ಯೋಗಿಯ ನೇತೃತ್ವದಲ್ಲಿ ಬಿಜೆಪಿಯವರು ನಮ್ಮ ರಾಜ್ಯವನ್ನು ಯಾವ ಪರಿಸ್ಥಿತಿಗೆ ತೆಗೆದುಕೊಂಡು ಹೋಗಬಹುದು
ಎಂದು ಪ್ರಶ್ನಿಸಿದರು.

Related posts

Leave a Reply