Header Ads
Header Ads
Header Ads
Breaking News

ಬಿಜೆಪಿಯ ಪರಿವರ್ತನಾ ಯಾತ್ರೆ ವೈಫಲ್ಯಯಾತ್ರೆ ಮನೆ ಮನೆಗೆ ಭೇಟಿಯ ಮೂಲಕ ತಳಮಟ್ಟದಲ್ಲಿ ಕಾಂಗ್ರೆಸ್ ಸದೃಢ ಸುದ್ದಿಗೋಷ್ಟಿಯಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಪಿ.ವಿ.ಮೋಹನ್ ಹೇಳಿಕೆ

 

ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಬಿಜೆಪಿಯ ಪರಿವರ್ತನೆ ಯಾತ್ರೆ ಶೋಚನೀಯ ಸ್ಥಿತಿಯಲ್ಲಿದ್ದು ಇದು ವೈಫಲ್ಯದ ಯಾತ್ರೆಯಾಗಿದೆ. ಬಿ‌ಎಸ್‌ವೈ ಮತ್ತು ಸಂತೋಷ್ ಅಸಮಾಧಾನ ಮುಂದುವರಿದಿದೆ. ಯಾತ್ರೆ ಬಗ್ಗೆ ಸಂಘಪರಿವಾರದವರಿಗೆ ಒಲವಿಲ್ಲ ಎಂದರು. ಕಾಂಗ್ರೆಸ್ ಕಾರ್ಯಕರ್ತರ ಮನೆಮನೆ ಭೇಟಿ ಕಾರ್ಯಕ್ರಮ ಐತಿಹಾಸಿಕವಾದುದು. ತಳಮಟ್ಟದಲ್ಲಿ ಕಾರ್ಯಕ್ರಮಗಳಿಂದಾಗಿ ಬಿಜೆಪಿಯವರ ಜಂಘಾಬಲವೇ ಉಡುಗಿದಂತಾಗಿದೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ಪಿ.ವಿ.ಮೋಹನ್ ಹೇಳಿದ್ದಾರೆ.

ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್‌ನ ಮನೆ ಮನೆ ಭೇಟಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗುತ್ತಿದೆ. ಡಿಸೆಂಬರ್‌ನಲ್ಲಿ ಮರಳಿ ಮನೆ ಭೆಟಿ ಕಾರ್ಯಕ್ರಮ ನಡೆಯಲಿದೆ. ಮುಂದಿನ ಚುನಾವಣೆಯಲ್ಲಿ ಡಾ. ಜಿ. ಪರಮೇಶ್ವರ ಅವರ ನೇತೃತ್ವದಲ್ಲಿ 140  ಸ್ಥಾನಗಳನ್ನು ಪಡೆಯಲಿದೆ ಎಂದ ಅವರು ನ. 19  ರಂದು ಮಾಜಿ ಪ್ರದಾನಿ ಇಂದಿರಾ ಗಾಂಧಿಯವರ ಜನ್ಮಶತಮಾನೋತ್ಸವ ಅಂಗವಾಗಿ ಎಲ್ಲಾ ಬೂತ್‌ಗಳಲ್ಲಿ 100 ಮಹಿಳೆಯರಿಂದ ದೀಪ ನಮನ ಕಾರ್ಯಕ್ರಮ ಮತ್ತು ಇಂದಿರಾಗಾಂಧಿ ವಿಚಾರಧಾರೆ ಕಾರ್ಯಕ್ರಮ ತಿಂಗಳ ಕಾಲ ನಡೆಯಲಿದೆ ಎಂದರು.
ಕೆ.ಪಿ.ಸಿ.ಸಿ ಸದಸ್ಯ ಎಂ. ವೆಂಕಪ್ಪ ಗೌಡ ಮಾತನಾಡಿ ಸುಳ್ಯದಲ್ಲಿ ಜರಗಿದ ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದು ಅತಿರೇಕದ ಪರಮಾವಧಿ. ಎಷ್ಟೇ ಸಣ್ಣ ವ್ಯಕ್ತಿಯಾದರೂ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲಘಿ. ಅವರು ದೃತಿಗೆಟ್ಟಿರುವುದರಿಂದಲೇ ಹೀಗೆ ನಡೆದುಕೊಂಡಿದ್ದಾರೆ. ಬಿ‌ಎಸ್‌ವೈ ಅವರು ಬಳಸಿದ ಶೈಲಿಯನ್ನು ಉತ್ತರಕರ್ನಾಟಕಕ್ಕೆ ಸೀಮಿತವಿಡಲಿ. ದ.ಕ. ಜಿಲ್ಲೆಯಲ್ಲಿ ಆಗಮಿಸಿ ಆ ರೀತಿಯ ಏಕವಚನ ಬಳಕೆ ಮಾಡಬಾರದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಡಿಕೆ ಕೊಳೆರೋಗಕ್ಕೆ ಸ್ಪಂದಿಸಿ ಹೆಕ್ಟೇರ್‌ಗೆ 12 ಸಾವಿರ ರೂಪಾಯಿ ಪರಿಹಾರ ನೀಡಿದ್ದಾರೆ. ಬಿ‌ಎಸ್‌ವೈ ಅವರು ಮಾಡಿದ ಸಾಲಮನ್ನಾ ಹಣವನ್ನು ಕಾಂಗ್ರೆಸ್ ಸರಕಾರ ನೀಡಿದೆ. ಹಿಂದೆ ಮುಖ್ಯಮಂತ್ರಿ ಡಿ.ವಿ.ಎಸ್. ಆಡಳಿತಾವಧಿಯಲ್ಲಿ ನೀಡಿದ ಕೊಳೆರೋಗದ ಅರ್ಜಿಗಳು ಇನ್ನೂ ಗೆದ್ದಲು ಹಿಡಿಯುತ್ತಿರುವುದರ ಬಗ್ಗೆ ಬಿಜೆಪಿಗರು ನೆನಪು ಮಾಡಿಕೊಳ್ಳಬೇಕು ಎಂದರು.
ಕೇಂದ್ರ ಯುಪಿ‌ಎ ಸರಕಾರ ಅವಧಿಯಲ್ಲಿ ಗರಿಷ್ಠ 330 ರೂಪಾಯಿಗೆ ಅಡಿಕೆ ಮಾರಾಟ ಮಾಡಿದ್ದಾರೆ. ಈಗ ಬೆಲೆ 245 ಕ್ಕಿಳಿದಿದೆ. ಇದಕ್ಕೆ ರಾಜ್ಯ ಸರಕಾರ ಕಾರಣವೇ ಎಂದು ಪ್ರಶ್ನಿಸಿದರಲ್ಲದೇ ತಾಲೂಕನ್ನು ಪ್ರತಿನಿಧಿಸುವ ಶಾಸಕರು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಲಿ ಅಥವಾ ಸಂಸದರು ಕೇಂದ್ರ ಸರಕಾರದ ಗಮನಸೆಳೆಯಬೇಕು. ಜಿಲ್ಲೆಗೆ ಪ್ರಧಾನಿಯವರು ಭೇಟಿ ನೀಡುವಾಗಲು ಬಿಜೆಪಿಯವರು ಸಮಸ್ಯೆ ಬಗ್ಗೆ ಗಮನಸೆಳೆಯಲಿಲ್ಲ ತಮಗೂ ಅವಕಾಶ ಕಲ್ಪಿಸಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಗಂಗಾಧರ ಪಿ.ಎಸ್., ಪದಾಧಿಕಾರಿಗಳಾದ ಲುಕ್ಮಾನ್ ಬಂಟ್ವಾಳ, ಸುನಿತ್ ಡೇಸಾ, ಶಾಪಿ ಕುತ್ತಮೊಟ್ಟೆ, ಶರೀಪ್ ಕಂಠಿ ಮತ್ತಿತರಿದ್ದರು.

Related posts

Leave a Reply