Breaking News

ಬಿಜೆಪಿಯ ಭ್ರಷ್ಟಾಚಾರ ಜಗಜ್ಜಾಹೀರಾದ ವಿಚಾರ, ಮಂಗಳೂರಿನಲ್ಲಿ ಸುದರ್ಶನ್ ಚಾಟಿಯೇಟು

ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಭ್ರಷ್ಟ ಎಂದು ಹೇಳುವ ನೈತಿಕತೆ ಬಿಜೆಪಿಗಿಲ್ಲ. ಯಡಿಯೂರಪ್ಪ ಸರ್ಕಾರದ ಭ್ರಷ್ಟಾಚಾರ ಎಲ್ಲರಿಗೂ ತಿಳಿದಿದ್ದು, ಬಿಜೆಪಿ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಾಗಿದೆ ಎಂದು ಕೆಪಿಸಿಸಿ ವಕ್ತಾರ ಸುದರ್ಶನ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಬಿಜೆಪಿಯ ಮೂರು ಸಿ‌ಎಂಗಳ ಆಡಳಿತದಿಂದ ರಾಜ್ಯದ ಜನತೆ ಬೆಚ್ಚಿ ಬಿದ್ದಿದ್ದರು. ಬಿಜೆಪಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದು, ಕರ್ನಾಟಕದ ಜನತೆ ಬಿಜೆಪಿಗೆ ಮತ್ತೊಮ್ಮೆ ಅವಕಾಶ ನೀಡುವುದಿಲ್ಲ. ೨೦೧೮ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಸಿ‌ಎಂ ಇಬ್ರಾಹಿಂ ಹಾಗೂ ದೇವೇಗೌಡರ ಭೇಟಿಗೆ ರಾಜಕೀಯ ಅರ್ಥ ಬೇಡ. ಹಳೆಯ ಒಡನಾಟದಿಂದ ದೇವೇಗೌಡರ ಆರೋಗ್ಯ ವಿಚಾರಿಸಲು ಇಬ್ರಾಹೀಂ ತೆರಳಿದ್ದಾರೆ ಎಂದು ಸುದರ್ಶನ್ ಹೇಳಿದ್ದಾರೆ.

Related posts

Leave a Reply