
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸೋಲಿನ ಭಯ ಶುರುವಾಗಿದೆ. ಉಪಚುನಾವಣೆಯಲ್ಲಿ ರಾಜ್ಯದ ದಿಕ್ಸೂಚಿಯ ಅರಿವಾಗಿದೆ. ಅಮಿತ್ ಶಾ ತಂತ್ರವು ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಉಡುಪಿಯ ಉಪ್ಪೂರಿನಲ್ಲಿ ಮಾತನಾಡಿ, ಕರ್ನಾಟಕದ ಮತದಾರ ಕಾಂಗ್ರೆಸ್ ಪಕ್ಷ ಗೆಲ್ಲಿಸುತ್ತಾರೆ. ಅಮಿತ್ ಶಾ ಗೌಪ್ಯ ಸಭೆ ಮಾಡಲಿ. ಸೂಕ್ತ ಸಮಯದಲ್ಲಿ ನಮ್ಮ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಲಿದ್ದೇವೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಯಾವ ಹಣದಲ್ಲಿ ವಿದೇಶ ಸುತ್ತುತ್ತಿದ್ದಾರೆ. ಮೋದಿಯವರು ಸ್ವಂತ ದುಡ್ಡಲ್ಲಿ ಓಡಾಡುತ್ತಾರಾ ಎಂದು ಪ್ರಶ್ನಿಸಿದರು ಸಿಎಂ ನಾವು ಸರ್ಕಾರಿ ಕಾರ್ಯಕ್ರಮಕ್ಕೆ ಮಾತ್ರ ಓಡಾಟ ಮಾಡುತ್ತೇವೆ ಎಂದು ಹೇಳಿದರು.