Header Ads
Breaking News

ಬಿಜೆಪಿ ಅಲ್ಪಸಂಖ್ಯಾತ ಕಾರ್ಯಕರ್ತನಿಗೆ ಜೀವಬೆದರಿಕೆ; ಕೊಣಾಜೆ ಪೊಲೀಸ್  ಠಾಣೆಯಲ್ಲಿ ದೂರು ದಾಖಲು

 

ಉಳ್ಳಾಲ: ಬಿಜೆಪಿಯಲ್ಲಿರುವ ಮುಸ್ಲಿಂ ಕಾರ್ಯಕರ್ತ ಹಾಗೂ ವಕೀಲರೊಬ್ಬರಿಗೆ ಸಿಎಎ- ಎನ್ ಆರ್ ಸಿ ಯಿಂದ ಮುಸ್ಲಿಮರಿಗೆ ತೊಂದರೆ ಇಲ್ಲ ಅನ್ನುವ ಫೇಸ್‍ಬುಕ್ ಪೋಸ್ಟ್ ಹಾಕಿರುವ ಹಿನ್ನೆಲೆಯಲ್ಲಿ ವಿದೇಶಿ ಸಂಖ್ಯೆಯಿಂದ ಬಂದಿರುವ ದೂರವಾಣಿ ಮೂಲಕ ಕೊಲೆಬೆದರಿಕೆ ಹಾಕಲಾಗಿದ್ದು, ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಜೀರು ಸಾಂಬಾರುತೋಟ ನಿವಾಸಿ ಮಹಮ್ಮದ್ ಅಸ್ಗರ್ ಎಂಬರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಜ.8ರ ಸಂಜೆ 6.59 ಕ್ಕೆ  48 ನಿಮಿಷಗಳ ಕಾಲ +6281316748321 ಸಂಖ್ಯೆಯಿಂದ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕರೆ ಕಟ್ ಮಾಡಲಾಗಿದ್ದರೂ ವಾಟ್ಸ್ಯಾಪ್ ಮೂಲಕ +6281316748321 ಸಂಖ್ಯೆಯಿಂದ ವಾಯ್ಸ್ ಮೆಸೇಜ್ ಮೂಲಕ ಹೆತ್ತವರಿಗೆ ಹಾಗೂ ಮಹಮ್ಮದ್ ಅಝ್ಗರ್ ಅವರಿಗೆ ಬೆದರಿಕೆ ಹಾಕಿ ` ನಿನ್ನನ್ನು ನಾವು ಬಿಟ್ಟಿದ್ದು ದೊಡ್ಡ ತಪ್ಪು, ನಿನ್ನನ್ನು ಯಾವತ್ತೋ ಮುಗಿಸಬೇಕಿತ್ತು ಎಂದು ಕೊಲೆ ಬೆದರಿಕೆ ಹಾಕಲಾಗಿದೆ. ಈ ಕುರಿತು ಕೊಣಾಜೆ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *