Header Ads
Breaking News

ಬಿಜೆಪಿ ಆಡಳಿತಾವಧಿಯಲ್ಲಿ ಅತೀ ಹೆಚ್ಚು ಭಯೋತ್ಪಾದನೆ: ಮಂಗಳೂರಲ್ಲಿ ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್

ಬಿಜೆಪಿ ಆಡಳಿತಾವಧಿಯಲ್ಲಿ ಅತೀ ಹೆಚ್ಚು ಭಯೋತ್ಪಾದನೆ ಆಗಿದೆ. ಭಯೋತ್ಪಾಧನೆ ಕಂಟ್ರೋಲ್ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್ ಹೇಳಿದರು. ಈ ಕುರಿತು ಮಂಗಳೂರಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,ಧರ್ಮದ ಬಗ್ಗೆ ಮಾತನಾಡುವ ನೀವೂ, ಯಾವ ಧರ್ಮವನ್ನು ರಕ್ಷಣೆ ಮಾಡಲು ಹೊರಟಿದ್ದೀರಿ. ಬಿಜೆಪಿ ಆಡಳಿತಾವಧಿಯಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆದಿವೆ. ಬಿಜೆಪಿಗೆ ಭಯೋತ್ಪಾದನೆಯನ್ನು ಮಟ್ಟಹಾಕಲು ಸಾಧ್ಯವಾಗುತ್ತಿಲ್ಲ, ನಿಮ್ಮ ವೈಫಲ್ಯವನ್ನು ಇನ್ನೊಬ್ಬರ ಮೇಲೆ ಹಾಕಿ, ದೇಶಕ್ಕಾಗಿ ತ್ಯಾಗ ಮಾಡಿದ ಪಕ್ಷ ಕಾಂಗ್ರೆಸ್ ಮೇಲೆ ಆರೋಪ ಹೊರಿಸುತ್ತಿದೆ. ವೈವಿಧ್ಯತೆಯನ್ನು ಸ್ವೀಕಾರಿಸಲು ಸಾಧ್ಯವಾಗದಿದ್ದರೆ, ನೀವೂ ದೇಶವನ್ನು ಆಳಲು ನಾಲಾಯಕ್ ಅಂತಾ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ .ಇನ್ನು ೨೦೧೯ರಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮಿತ್ರ ಪಕ್ಷವನ್ನು ಸೋಲಿಸಿ, ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

Related posts

Leave a Reply

Your email address will not be published. Required fields are marked *